ಇಂಗ್ಲೆಂಡ್ಗೆ ಜಯ
ಆ್ಯಂಟಿಗುವಾ: ಪಂದ್ಯದ ಕಡೇಯ ಕ್ಷಣದಲ್ಲಿ ಆಲ್ರೌಂಡರ್ ರವಿ ಬೊಪಾರ ಹಾಗೂ ಸ್ಟುವರ್ಟ್ ಬ್ರಾಡ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಗೆಲವು ದಾಖಲಿಸಿದೆ. ಭಾನುವಾರ ಸರ್ ವಿವಿಎನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ 3 ವಿಕೆಟ್ಗಳ ಗೆಲವು ದಾಖಲಿಸಿದೆ. ಈ ಮೂಲಕ 3 ಏಕದಿನ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-1ರ ಸಮಬಲ ಸಾಧಿಸಿತು. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡ, 44.2 ಓವರ್ಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 159 ರನ್ಗಳಿಗೆ ನಿಯಂತ್ರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ 44.5 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಇಂಗ್ಲೆಂಡ್ ತಂಡ ಸಾಧಾರಣ ಮೊತ್ತವನ್ನೇ ಬೆನ್ನಟ್ಟಿತಾದರೂ 105 ರನ್ಗಳಿಗೆ 7 ವಿಕೆಟ್ ಕಳೆದುಕೊಳ್ಳುವ ತೀರಾ ಒತ್ತಡಕ್ಕೆ ಸಿಲುಕಿತು. ಈ ವೇಳೆ ಜತೆಯಾದ ಬೊಪಾರ ಹಾಗೂ ಬ್ರಾಡ್ ಅರ್ಧಶತಕದ ಜತೆಯಾಟ ನೀಡಿ ತಂಡವನ್ನು ಗೆಲವಿನ ದಡ ಸೇರಿಸಿದರು. ಇಂಗ್ಲೆಂಡ್ ಪರ 3 ವಿಕೆಟ್ ಪಡೆದ ಸ್ಟೀಫನ್ ಪೆರ್ರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್ 44.2 ಓವರ್ಗಳಲ್ಲಿ 159, ಲೆಂಡ್ಲ್ ಸಿಮನ್ಸ್ 70, ಡ್ವೈನ್ ಬ್ರಾವೊ 20, ಸ್ಟೀಫನ್ ಪೆರ್ರಿ 32ಕ್ಕೆ3
ಇಂಗ್ಲೆಂಡ್ 44.5 ಓವರ್ಗಳಲ್ಲಿ 7 ವಿಕೆಟ್ಗೆ 163 ಮೈಕಲ್ ಲಂಬ್ 39, ಬೊಪಾರ 38, ನಿಕಿತ್ ಮಿಲ್ಲರ್ 28ಕ್ಕೆ2