ಟೀಂ ಇಂಡಿಯಾ ಪ್ರಯತ್ನ ಕೆಟ್ಟದಾಗಿದೆ
ಮೀರ್ಪುರ: ಸತತ ಸೋಲಿನಿಂದ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿರುವ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ವಿರೋಚಿತ ಸೋಲು ಅನುಭವಿಸಿರುವ ಹಿನ್ನಲೆಯಲ್ಲಿ ಭಾರತ ತಂಡದ ಪ್ರಯತ್ನ ತೀರಾ ಕೆಟ್ಟದಾಗಿದೆ ಎಂದು ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಕಡೇಯ ಓವರ್ನಲ್ಲಿ ಪಾಕ್ ವಿರುದ್ಧ ಸೋಲನುಭವಿಸಿತು. ಈ ಮೂಲಕ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಫೈನಲ್ ಸುತ್ತಿಗೆ ಪ್ರವೇಶಿಸುವ ಹಾದಿ ಕಠಿಣವಾಗಿದೆ.
ಭಾರತ ತಂಡದ ಆಟಗಾರರು ಉತ್ತಮ ರೀತಿಯಲ್ಲಿ ಅಭ್ಯಾಸ ನಡೆಸುತ್ತಿಲ್ಲ. ಅವರ ಕಾರ್ಯವೈಖರಿ ಕಳಪೆಯಾಗಿದೆ. ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಹೊರತಾಗಿ ಭಾರತ ತಂಡದ ಉಳಿದ ಯಾವುದೇ ಆಟಗಾರರು ಅಭ್ಯಾಸದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ. ಭಾರತ ತಂಡ ಅನಾವಶ್ಯಕವಾಗಿ ವಿಕೆಟ್ಗಳನ್ನು ಕೈಚೆಲ್ಲಿದೆ ಎಂದು ಹೇಳಿದ್ದಾರೆ.