ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ತಂಡದ ಪ್ರದರ್ಶನ ತೃಪ್ತಿ ತಂದಿದೆ: ವಿರಾಟ್ ಕೊಹ್ಲಿ

ನಿರಂತರವಾಗಿ ಸೋಲುವ ಮೂಲಕ ಏಷ್ಯಾ ಕಪ್ ಫೈನಲ್ ಹಾದಿ ದುರ್ಗಮವಾಗಿದ್ದರೂ ನಾನು ಕಂಗೆಟ್ಟಿಲ್ಲ..

Srinivasa Murthy VN
Updated On : 3 Mar 2014, 11:40 am

ಮಿರ್‌ಪುರ: ದ್ವೀಪರಾಷ್ಟ್ರ ಶ್ರೀಲಂಕಾ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ನಿರಂತರವಾಗಿ ಸೋಲುವ ಮೂಲಕ ಏಷ್ಯಾ ಕಪ್ ಫೈನಲ್ ಹಾದಿ ದುರ್ಗಮವಾಗಿದ್ದರೂ ನಾನು ಕಂಗೆಟ್ಟಿಲ್ಲ. ಬದಲಾಗಿ ತಂಡ ನೀಡಿದ ಪ್ರದರ್ಶನದಿಂದ ಉತ್ಸುಕನಾಗಿದ್ದೇನೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿಳಿಸಿದರು.
  'ಸೋಲು ನನಗೆ ಅಚ್ಚರಿ ಉಂಟುಮಾಡಿಲ್ಲ. ಆದರೆ, ಅನುಭವಿ ಆಟಗಾರರು ಇಲ್ಲದಿದ್ದರೂ, ನಮ್ಮ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ನೀಡಿದ ಪ್ರದರ್ಶನದಿಂದ ನನಗೆ ನಿಜವಾಗಿಯೂ ಹೆಮ್ಮೆ ಉಂಟುಮಾಡಿದೆ. ಪಾಕಿಸ್ತಾನದ ವಿರುದ್ಧ 245 ರನ್ ಗಳಿಸಿದ್ದು ಸುಲಭ ಸಾಧ್ಯವಿರಲಿಲ್ಲ.
   ಆದರೆ, ಆಟಗಾರರು ಅದ್ಭುತ ಪ್ರದರ್ಶನ ತೋರಿದರು. ಅಂತಿಮ ಓವರ್‌ನಲ್ಲಿ ಶಾಹಿದ್ ಅಫ್ರಿದಿ ಎರಡು ಸಿಕ್ಸರ್‌ಗಳನ್ನು ಬಾರಿಸಿದಿದ್ದರೆ, ಭಾರತ ತಂಡ ಪಂದ್ಯದಲ್ಲಿ ಜಯ ಕಂಡಿರುತ್ತಿತ್ತು' ಎಂದು ಕೊಹ್ಲಿ ತಿಳಿಸಿದರು.    'ಪಾಕಿಸ್ತಾನ ತಂಡದಲ್ಲಿ ಅನುಭವಿ ಬ್ಯಾಟ್ಸ್‌ಮನ್‌ಗಳಿದ್ದರು. ಆದರೆ, ನಾವು ಅನನುಭವಿ ಬೌಲರ್‌ಗಳನ್ನು ಹೊಂದಿದಾಗ್ಯೂ, ಗಮನಸೆಳೆಯುವ ಪ್ರದರ್ಶನ ನೀಡಿದ್ದೇವೆ. ಅಮಿತ್ ಮಿಶ್ರಾ ಅವರ ಬಗ್ಗೆ ಹೇಳುವುದಾದರೆ, 10 ಓವರ್‌ಗಳ ಬೌಲಿಂಗ್ ಮಾಡಿದ ಅವರು ಕೇವಲ 28 ರನ್ ನೀಡಿ 2 ವಿಕೆಟ್ ಕಬಳಿಸಿದರು. ಅಲ್ಲದೆ, ಪಾಕಿಸ್ತಾನದ ಮಿಸ್ಬಾ ಉಲ್ ಹಕ್, ಹಫೀಜ್, ಉಮರ್ ಅಕ್ಮಲ್, ಶಾಹಿದ್ ಅಫ್ರಿದದಿಯಂತಹ ಬ್ಯಾಟ್ಸ್‌ಮನ್‌ಗಳ ವಿರುದ್ಧ ಮಿಶ್ರಾ ಮೊನಚಾದ ಬೌಲಿಂಗ್ ಪ್ರದರ್ಶಿಸಿದರು. ಇದೊಂದು ಅದ್ಭುತ ಪ್ರದರ್ಶನವಾಗಿದ್ದು, ನಿಜವಾಗಿಯೂ ನಾನು ಹೆಮ್ಮೆಪಟ್ಟಿದ್ದೇನೆ' ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement