ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಹರಿಣಗಳ ವಿರುದ್ಧ ಕಾಂಗರೂ ಮುನ್ನಡೆ

Srinivasa Murthy VN
Updated On : 3 Mar 2014, 11:40 am

ಕೇಪ್‌ಟೌನ್: ಮಿಂಚಿನ ವೇಗದ ದಾಳಿಯನ್ನು ಮುಂದುವರಿಸಿರುವ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಗಳಿಗೆ ಮಾರಕವಾಗಿದ್ದು, ಆಸೀಸ್ ತಂಡ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಲು ನೆರವಾಗಿದ್ದಾರೆ.
ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನವಾದ ಸೋಮವಾರದ ಆಟದಲ್ಲಿ ದಕ್ಷಿಣ ಆಫ್ರಿಕಾ ತಂಡ 287 ರನ್‌ಗಳಿಗೆ ಕುಸಿತ ಕಂಡಿದೆ. ಈ ಮೂಲಕ ಆಸೀಸ್ ಪಡೆ ಮೊದಲ ಇನಿಂಗ್ಸ್‌ನಲ್ಲಿ 207 ರನ್‌ಗಳ ಮುನ್ನಡೆ ಪಡೆದು ಪಂದ್ಯದಲ್ಲಿ ನಿಯಂತ್ರಣ ಸಾಧಿಸಿದೆ.
ಪಂದ್ಯದ ಎರಡನೇ ದಿನಾಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 494 ರನ್‌ಗಳಿಸಿದ್ದ ಆಸ್ಟ್ರೇಲಿಯಾ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ನಂತರ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಆಸೀಸ್ ಬೌಲಿಂಗ್ ದಾಳಿ ವಿರುದ್ಧ ನೆಲೆ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.
ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ದಕ್ಷಿಣ ಆಫ್ರಿಕಾ ಒತ್ತಡಕ್ಕೆ ಸಿಲುಕಿತು. ಈ ವೇಳೆ ಆಸೀಸ್‌ಗೆ ಹೋರಾಟ ನೀಡಲು ಪ್ರಯತ್ನಿಸಿದ ಆಲ್ವಿರೊ ಪೀಟರ್ಸನ್ (53), ಫಫ್ ಡುಪ್ಲೆಸಿಸ್ (67) ಅರ್ಧಶತಕ ದಾಖಲಿಸಿದರು. ಉಳಿದಂತೆ ಯಾವುದೇ ಬ್ಯಾಟ್ಸ್‌ಮನ್ ಗಮನಾರ್ಹ ಪ್ರದರ್ಶನ ನೀಡಲಿಲ್ಲ.
ಆಸ್ಟ್ರೇಲಿಯಾ ತಂಡದ ಪರ ಮತ್ತೊಮ್ಮೆ ದಾಳಿಯಲ್ಲಿ ಮಿಂಚಿದ ಮಿಚಲ್ ಜಾನ್ಸನ್ 42 ರನ್‌ಗಳಿಗೆ 4 ವಿಕೆಟ್ ಪಡೆದರೆ, ರಯಾನ್ ಹ್ಯಾರಿಸ್ 3, ಜೇಮ್ಸ್ ಪ್ಯಾಟಿನ್ಸನ್ 2 ಹಾಗೂ ವ್ಯಾಟ್ಸನ್ 1 ವಿಕೆಟ್ ಕಬಳಿಸಿದರು.
ಎಡಗೈ ವೇಗಿ ಜಾನ್ಸನ್ ವೇಗದ ಜೊತೆಗೆ ಸ್ವಿಂಗ್ ಮಾಡುವಲ್ಲಿಯೂ ಯಶಸ್ವಿಯಾಗುವುದರೊಂದಿಗೆ ದಕ್ಷಿಣ ಆಫ್ರಿಕಾದ ಆಟಗಾರರನ್ನು ಸಂಪೂರ್ಣಬಂಧಿಸಿದ್ದರು. ಅದೇ ರೀತಿ ಜಾನ್ಸನ್‌ಗೆ ಮತ್ತೊಂದು ತುದಿಯಿಂದ ಸೂಕ್ತ ಬೆಂಬಲ ನೀಡಿದ ರಯಾನ್ ಹ್ಯಾರಿಸ್ ಕೂಡ ಅಪಾಯಕಾರಿಯಾದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 7 ವಿಕೆಟ್‌ಗೆ 494 ಡಿಕ್ಲೇರ್ ಹಾಗೂ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ 287 (ಫಫ್ ಡುಪ್ಲೆಸಿಸ್ 67, ಆಲ್ವಿರೊ ಪೀಟರ್ಸನ್ 53, ಮಿಚಲ್ ಜಾನ್ಸನ್ 42ಕ್ಕೆ4, ಹ್ಯಾರಿಸ್ 63ಕ್ಕೆ3).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement