ಮೇರಿ ಕೋಮ್ಗೆ ಲಿಮ್ಕಾ ಸನ್ಮಾನ
ನವದೆಹಲಿ: ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ವಿಜೇತೆ ಬಾಕ್ಸರ್ ಮೇರಿಕೋಮ್ ಹಾಗೂ ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ಸೇರಿದಂತೆ ಭಾರತೀಯ 25 ಸ್ಫೂರ್ತಿದಾಯಕ ಮಹಿಳಿಯರಿಗೆ ಲಿಮ್ಕಾ ಸನ್ಮಾನ ಮಾಡಿದೆ.
ಲಿಮ್ಕಾ ರೆಕಾರ್ಡ್ ಬುಕ್ ತನ್ನ 25ನೇ ವರ್ಷಾಚರಣೆ ಹಿನ್ನಲೆಯಲ್ಲಿ ಸಮಾಜದಲ್ಲಿ ತಮ್ಮದೇ ಆದ ಕ್ಷೇತ್ರದಲ್ಲಿ ಉತ್ತಮ ಕೊಡುಗೆ ನೀಡಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತಂದಂತಹ ಭಾರತದ 25 ಸ್ಫೂರ್ತಿದಾಯಕ ಮಹಿಳೆಯರಿಗೆ ಸನ್ಮಾನ ಮಾಡಿದೆ.
ಸಾಕಷ್ಟು ಅತ್ಯುತ್ತಮ ಮಹಿಳೆಯರ ಜತೆ ಇರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಅವಕಾಶ ನೀಡಿದ ಲಿಮ್ಕಾ ರೆಕಾರ್ಡ್ ಬುಕ್ ಅವರಿಗೆ ಧನ್ಯವಾದ ಅರ್ಪಿಸಲು ಇಚ್ಛಿಸುತ್ತೇನೆ. ಈ ಸಮಾರಂಭದಲ್ಲಿ ಪಾಲ್ಗೊಂಡಿರುವುದು ನನ್ನ ಅದೃಷ್ಟ ಎಂದು ಮೇರಿಕೋಮ್ ಅಭಿಪ್ರಾಯಪಟ್ಟಿದ್ದಾರೆ.
ಅತ್ಯುನ್ನತ ಸಾಧನೆ ಮಾಡಿರುವ ಮಹಿಳೆಯರ ಗುಂಪಿನಲ್ಲಿ ನಾನು ಸೇರಿಕೊಂಡಿರುವುದು ಹೆಚ್ಚು ಸಂತೋಷ ನೀಡಿದೆ. ನನ್ನ ಕುಟುಂಬ ಹಾಗೂ ಕೋಚ್ಗಳು ನಂಬಿಕೆ ಇಟ್ಟು ಉತ್ತಮ ಬೆಂಬಲ ನೀಡಿದರು. ಹಾಗಾಗಿ ಎಲ್ಲರಿಗೂ ಧನ್ಯವಾದ ಅರ್ಪಿಸಲು ಇಚ್ಛಿಸುತ್ತೇನೆ ಎಂದು ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ತಿಳಿಸಿದ್ದಾರೆ.