ರುನಾಲ್ಡೋ ದಾಖಲೆ
ಲೀರಿಯಾ: ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರುನಾಲ್ಡೋ ಅವರು ಪೋರ್ಚುಗಲ್ ಪರ ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಕೆಮರೂನ್ ದೇಶದ ವಿರುದ್ಧ 5-1 ಗೋಲುಗಳ ಅಂತರದಿಂದ ಪೊರ್ಚುಲ್ ತಂಡ ಗೆದ್ದ ಪಂದ್ಯದಲ್ಲಿ, 2 ಗೋಲು ದಾಖಲಿಸಿದ ರುನಾಲ್ಡೋ ಈ ಸಾಧನೆ ಮಾಡಿದರು. ಪಂದ್ಯದ 21ನೇ ಮತ್ತು 83ನೇ ನಿಮಿಷದಲ್ಲಿ ಗೋಲು ದಾಖಲಿಸಿದ ರುನಾಲ್ಡೋ ತಮ್ಮ ಹೆಸರಲ್ಲಿ ಹೊಸ ದಾಖಲೆ ಬರೆದರು.