ಬಾಂಗ್ಲಾ ಮಣಿಸಿದ ಭಾರತ ವನಿತೆಯರು
ಕಾಕ್ಸ್ ಬಜಾರ್: ನಾಯಕಿ ಮಿಥಾಲಿ ರಾಜ್ (ಅಜೇಯ 55) ಅರ್ಧ ಶತಕದ ನೆರವಿನೊಂದಿಗೆ ಭಾರತ ವನಿತೆಯರ ತಂಡ ಬಾಂಗ್ಲಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ 16 ರನ್ಗಳ ಅಂತರದಿಂದ ಜಯ ಸಾಧಿಸಿತು.
ಇದರೊಂದಿಗೆ ಐಸಿಸಿ ವಿಶ್ವ ಟಿ20 ಪಂದ್ಯಾವಳಿಗೆ ಸೂಕ್ತ ತಯಾರಿ ನಡೆಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ನಿಗದಿತ ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿತ್ತು. ಮಿಥಾಲಿ ರಾಜ್ ಅವರೊಂದಿಗೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಇನ್ನೊಬ್ಬ ಆಟಗಾರ್ತಿ ಪೂನಮ್ ರೌತ್ (42) ಅವರು ಮುರಿಯದ ಎರಡನೇ ವಿಕೆಟ್ ಜತೆಯಾಟದಲ್ಲಿ 98 ರನ್ ಕಲೆ ಹಾಕಿದ್ದು ತಂಡ 100 ರನ್ಗಳ ಗಡಿ ದಾಟಲು ನೆರವಾಯಿತು. 64 ಎಸೆತಗಳನ್ನು ಎದುರಿಸಿದ ಮಿಥಾಲಿ ರಾಜ್ ಅವರ ಅರ್ಧ ಶತಕದಲ್ಲಿ 4 ಬೌಂಡರಿಗಳು ಸೇರಿದ್ದವು.
ಇನ್ನು 46 ಎಸೆತಗಳನ್ನು ಎದುರಿಸಿದ ರೌತ್ ಮೊತ್ತದಲ್ಲಿ ಎರಡು ಬೌಂಡರಿಗಳು ಸೇರಿದ್ದವು. ಆದರೆ, ಭಾರತದ ಆರಂಭಿಕ ಆಟಗಾರ್ತಿ ಲತಿಕಾ ಕುಮಾರಿ (0) ಮಾತ್ರ 4ನೇ ಓವರ್ನಲ್ಲಿ ಬಾಂಗ್ಲಾದ ಜಹಾನಾರಾ ಅಲಮ್ ಎಸೆತದಲ್ಲಿ ಬೌಲ್ಡ್ ಆದರು. ಹೀಗಾಗಿ ಬಾಂಗ್ಲಾ ಪರ ಜಹಾನಾರಾ ಮಾತ್ರ ವಿಕೆಟ್ ಪಡೆದ ಏಕೈಕ ಬೌಲರ್ ಎನಿಸಿದರು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾ ವನಿತೆಯರ ತಂಡ, ನಿಗದಿತ 20 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 85 ರನ್ ಕಲೆ ಹಾಕಿತು. ಬಾಂಗ್ಲಾದೇಶದ ಪರ 21 ರನ್ ಗಳಿಸಿದ ರುಮಾನಾ ಅಹ್ಮದ್ ಅವರು ಮಾತ್ರ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿದರು.
ಭಾರತದ ಆಕರ್ಷಕ ಬ್ಯಾಟಿಂಗ್ ನಡೆಸಿದ ಎಡಗೈ ಸ್ಪಿನ್ನರ್ ಸ್ರಾವಂತಿ ನಾಯ್ಡು 3 ಓವರ್ಗಳಲ್ಲಿ ಕೇವಲ 9 ರನ್ ನೀಡಿ 4 ವಿಕೆಟ್ ಕಬಳಿಸಿ ಶ್ರೇಷ್ಠ ಸಾಧನೆ ಮಾಡಿದರು. ಹಿರಿಯ ಬೌಲರ್ ಜೂಲನ್ ಗೋಸ್ವಾಮಿ ಅವರು 14 ರನ್ ನೀಡಿ 2 ವಿಕೆಟ್ ಪಡೆದರು. ಸ್ಪಿನ್ನರ್ ಗೌಹಾರ್ ಸುಲ್ತಾನ್ ಸಹ 11 ರನ್ ನೀಡಿ 2 ವಿಕೆಟ್ಪಡೆದರು. ಇದರೊಂದಿಗೆ ಮೂರು ಪಂದ್ಯಗಳ ಸರಣಿಗಳಲ್ಲಿ ಭಾರತ ತಂಡ 1-0 ಅಂತರದಿಂದ ಮುನ್ನಡೆ ಕಂಡುಕೊಂಡಿದೆ.
ಅಲ್ಲದೆ, ಕೇವಲ ನಾಲ್ವರು ಆಟಗಾರ್ತಿಯರು ಮಾತ್ರ ಎರಡಂಕಿ ದಾಟಿದರು. ಆಯಷಾ ರಹಮಾನ್ (18), ಸಂಜಿದಾ ಇಸ್ಲಾಮ್ (15), ಸಲ್ಮಾ ಖಾತೂನ್ (15) ಅವರೇ ಆ ಮೂವರು ಆಟಗಾರ್ತಿಯರಾಗಿದ್ದಾರೆ.
ಉಳಿದಂತೆ ಬಾಂಗ್ಲಾದೇಶದ ಇತರ ಆಟಗಾರ್ತಿಯರು ಸಂಪೂರ್ಣವಾಗಿ ವೈಫಲ್ಯ ಕಂಡರು.
ಸಂಕ್ಷಿಪ್ತ ಸ್ಕೋರ್:ಭಾರತ 20 ಓವರ್ಗಳಲ್ಲಿ 1 ವಿಕೆಟ್ಗೆ 101(ಮಿಥಾಲಿ ರಾಜ್ 55, ಪೂನಮ್ ರೌತ್ 42ಜಹಾನಾರ ಅಲಂ 1/12)
ಬಾಂಗ್ಲಾದೇಶ 20 ಓವರ್ಗಳಲ್ಲಿ 85(ರುಮಾನಾ ಅಹ್ಮದ್ 21, ಆಯಷಾ ರಹೇಮಾನ್ 18ಸ್ರಾವಂತಿ ನಾಯ್ಡು 4/9, ಸುಲ್ತಾನ್ 2/11)