ಮಳೆಗೆ ಮೊದಲ ಟಿ20 ಆಹುತಿ
ಪೋರ್ಟ್ ಎಲಿಜಬೆತ್: ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಭಾನುವಾರ ನಡೆಯಬೇಕಿದ್ದ ಮೊದಲ ಟಿ20 ಪಂದ್ಯ ಸಂಪೂರ್ಣವಾಗಿ ಮಳೆಗೆ ಆಹುತಿಯಾಯಿತು.
ಆರಂಭದಲ್ಲಿ ಬಿದ್ದ ಅಲ್ಪ ಪ್ರಮಾಣದ ಮಳೆಯಿಂದ ಪಿಚ್ ಮುಚ್ಚಲಾಗಿತ್ತು.ನಂತರ ಒಂದು ಹಂತದಲ್ಲಿ ಅಂಪೈರ್ಗಳು ಪಿಚ್ ಪರೀಕ್ಷೆಗೆ ಇಳಿದಿದ್ದರು. ಆದರೆ, ಅಂತಿಮವಾಗಿ ಬಿದ್ದ ಭಾರೀ ಮಳೆ ಪಂದ್ಯವನ್ನು ಸಂಪೂರ್ಣವಾಗಿ ನುಂಗಿ ಹಾಕಿತು.