ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮೀರಾಬಾಯಿಗೆ ಮೂರು ಪದಕ

Srinivasa Murthy VN
Updated On : 10 Mar 2014, 12:27 pm

ನವದೆಹಲಿ: ಭಾರತದ ಕಿರಿಯ ವೇಯ್ಟ್‌ಲಿಫ್ಟರ್ ಮೀರಾಬಾಯಿ ಚನು ಅದ್ಭುತ ಪ್ರದರ್ಶನ ನೀಡುವ ಮೂಲಕ ಏಷ್ಯಾ ಜೂನಿಯರ್ ವೇಯ್ಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 3 ಬೆಳ್ಳಿ ಪದಕಗಳನ್ನು ಬಾಚಿಕೊಂಡು ಗಮನ ಸೆಳೆದಿದ್ದಾರೆ. ಭಾನುವಾರ ಥೈಲ್ಯಾಂಡ್‌ನ ಬ್ಯಾಂಗ್‌ಸೀನ್‌ನಲ್ಲಿ ನಡೆದ ಬಾಲಕಿಯರ 48 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಮೂರನೇ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಇದಕ್ಕು ಮೊದಲು ಮೀರಾಬಾಯಿ 93 ಕೆ.ಜಿ ವಿಭಾಗದಲ್ಲಿ ಹಾಗೂ 75 ಕೆ.ಜಿ ವಿಭಾಗದಲ್ಲೂ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು. ಇನ್ನು ಬಾಲಕರ ವಿಭಾಗದಲ್ಲಿ ಅಪೂರ್ಬಾ ಚೇಟಿಯಾ ಒಟ್ಟಾರೆ 233 ಕೆ.ಜಿಯನ್ನು ಎತ್ತುವ ಮೂಲಕ 6ನೇ ಸ್ಥಾನಕ್ಕೆ ತೃಪ್ತಿಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement