ಶೂಟಿಂಗ್: ಚಿನ್ನ ಗೆದ್ದ ಪೂಜಾ
ನವದೆಹಲಿ: ಭಾರತದ ಭರವಸೆಯ ಶೂಟರ್ ಪೂಜಾ ಘಟ್ಕರ್ 7ನೇ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಭಾನುವಾರ ಕುವೈತ್ನಲ್ಲಿ ಆರಂಭವಾದ ಪಂದ್ಯಾವಳಿಯ ಮಹಿಳೆಯರ ರೈಫಲ್ ವಿಭಾಗದಲ್ಲಿ ಪೂಜಾ ಚಿನ್ನದ ಪದಕ ಪಡೆದಿದ್ದಾರೆ. ಅರ್ಹತಾ ಸುತ್ತಿನಲ್ಲಿ 413.1 ಅಂಕಗಳನ್ನು ಪಡೆದುಕೊಂಡ ಪೂಜಾ, ಅಂತಿಮ ಸುತ್ತಿನಲ್ಲಿ 208.8 ಅಂಕಗಳನ್ನು ಪಡೆಯುವ ಮೂಲಕ ಅಗ್ರಸ್ಥಾನ ಪಡೆದರು. ಪೂಜಾ ತಮ್ಮ ಪ್ರತಿಸ್ಪರ್ಧಿ ಚೀನಾದ ಡಿ ಯು ಬೆಜ್ (207.2) ಅವರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದರು. ಬೆಜ್ ದ್ವಿತೀಯ ಸ್ಥಾನ ಪಡೆದರೆ, 186.2 ಅಂಕಗಳನ್ನು ಪಡೆದುಕೊಂಡ ಚೀನಾದ ವೈ ಐ ಸಿಲಿಂಗ್ ಅವರು ತೃತೀಯ ಸ್ಥಾನ ಪಡೆದರು.