ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಇಂದಿನಿಂದ ಸ್ವಿಸ್ ಓಪನ್: ಪ್ರಶಸ್ತಿ ಗೆಲ್ಲುವತ್ತ ಸೈನಾ ನೆಹ್ವಾಲ್ ಚಿತ್ತ

Srinivasa Murthy VN
Updated On : 10 Mar 2014, 10:58 am

ಬಾಸೆಲ್: ಕಳೆದ ವಾರ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ನಿರಾಸೆ ಅನುಭವಿಸಿದ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಇಂದಿನಿಂದ ಆರಂಭವಾಗಲಿರುವ ಸ್ವಿಸ್ ಓಪನ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಪಂದ್ಯಾವಳಿಯಲ್ಲಿ ಗೆಲವು ಸಾಧಿಸಲು ಸಜ್ಜಾಗಿದ್ದಾರೆ.
ಸೈನಾ ನೆಹ್ವಾಲ್ ಈ ಹಿಂದೆ 2011ರಲ್ಲಿ ಹಾಗೂ 2012ರಲ್ಲಿ ಸ್ವಿಸ್ ಓಪನ್ ಪಂದ್ಯಾವಳಿಯನ್ನು ತಮ್ಮದಾಗಿಸಿಕೊಂಡಿದ್ದರು. ಸೈನಾ ಬುಧವಾರ ಅರ್ಹತಾ ಸುತ್ತಿನಲ್ಲಿ ಆಡುವ ಮೂಲಕ ತಮ್ಮ ಅಭಿಯಾನವನ್ನು ಆರಂಭಿಸಲಿದ್ದಾರೆ.
ಇನ್ನು ಕಳೆದ ವರ್ಷ ಸೈನಾ ನೆಹ್ವಾಲ್ ಈ ಪಂದ್ಯಾವಳಿಯಲ್ಲಿ ಸೆಮಿಫೈನಲ್‌ವರೆಗೂ ಸಾಗಿದ್ದರು. ಸೈನಾ ನೆಹ್ವಾಲ್ ಈ ಬಾರಿ ಆರಂಭಿಕ ಎರಡು ಸುತ್ತುಗಳನ್ನು ಗೆದ್ದುಕೊಂಡು ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದರೆ, ಅಲ್ಲಿ ವಿಶ್ವದ ನಂಬರ್ ಒನ್ ಆಟಗಾರ್ತಿ ಯಿಹಾನ್ ವಾಂಗ್ ಅವರನ್ನು ಎದುರಿಸುವ ಸಾಧ್ಯತೆಗಳಿವೆ.  ಸೈನಾ ಕಳೆದ ಬಾರಿ ವಾಂಗ್ ಅವರನ್ನು ಎದುರಿಸಿದ್ದು, ಲಂಡನ್ ಒಲಿಂಪಿಕ್ಸ್‌ನಲ್ಲಿ. ಆ ಪಂದ್ಯದಲ್ಲಿ ವಾಂಗ್ ಗಾಯದ ಸಮಸ್ಯೆಯಿಂದ ಹೊರಗುಳಿದ ಪರಿಣಾಮ, ಸೈನಾ ಕಂಚಿನ ಪದಕ ಪಡೆಯಲು ಸಾಧ್ಯವಾಯಿತು.
ಇದುವರೆಗೂ ಸೈನಾ ವಾಂಗ್ ವಿರುದ್ಧ 7 ಪಂದ್ಯಗಳನ್ನಾಡಿದ್ದು ಅದರಲ್ಲಿ ಕೇವಲ ಒಂದು ಬಾರಿ ಮಾತ್ರ ಗೆಲವು ದಾಖಲಿಸಿದ್ದಾರೆ. ಸೈನಾ ಪಂದ್ಯಾವಳಿಯಲ್ಲಿ ಎಂಟರ ಘಟ್ಟವನ್ನು ದಾಟಬೇಕಾದರೆ, ವಾಂಗ್ ಅವರನ್ನು ಮಣಿಸಲೇಬೇಕಿದೆ. ಇನ್ನು ಭಾರತದ ಮತ್ತೋರ್ವ ಟೆನಿಸ್ ತಾರೆ ಪಿ.ವಿ ಸಿಂಧು ತಮ್ಮ ಮೊದಲ ಪಂದ್ಯದಲ್ಲಿ ಸ್ಪೇನ್‌ನ ಬೀಟ್ರಿಜ್ ಕೊರಾಲೆಸ್ ವಿರುದ್ಧ ಕಾದಾಟ ನಡೆಸಬೇಕಿತ್ತು. ಆದರೆ ಬೀಟ್ರಿಜ್ ಪಂದ್ಯಾವಳಿಯಿಂದ ಹಿಂದೆ ಸರಿದ ಪರಿಣಾಮ ಸಿಧು ಸುಲಭವಾಗಿ ಕ್ವಾರ್ಟರ್‌ಫೈನಲ್ ಪ್ರವೇಶಿಸುವ ಸಾಧ್ಯತೆಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement