ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಒಡಿಶಾ ಸೆಮೀಸ್‌ಗೆ

ಮಹಿಳೆಯರ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ಬಿ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಒಡಿಶಾ ತಂಡ ಸೋಮವಾರ ಅಸ್ಸಾಂ ತಂಡವನ್ನು 8-1 ಅಂತರದಿಂದ ಮಣಿಸಿದೆ.

Srinivasa Murthy VN
Updated On : 10 Mar 2014, 11:00 am

-ಡಿ.ಎನ್. ಮಹೇಂದ್ರ
ಮೈಸೂರು:
ನಿರಂತರ ಜಯದೊಂದಿಗೆ ಈ ಬಾರಿಯ ಕಿರಿಯ ಮಹಿಳೆಯರ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ಬಿ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಒಡಿಶಾ ತಂಡ ಸೋಮವಾರ ಅಸ್ಸಾಂ ತಂಡವನ್ನು 8-1 ಅಂತರದಿಂದ ಮಣಿಸಿದೆ.
ಚಾಮುಂಡಿ ವಿಹಾರ ಕ್ರೀಡಾಂಗಣದ ಹಾಕಿ ಟರ್ಫ್‌ನಲ್ಲಿ ಹಾಕಿ ಕರ್ನಾಟಕ ಆಯೋಜಿಸಿರುವ ಈ ಪಂದ್ಯಾವಳಿಯಲ್ಲಿ ಅಸ್ಸಾಂ ತಂಡಕ್ಕೆ ಕೇವಲ ಒಂದು ಗೋಲ್ ಬಾರಿಸಲಷ್ಟೆ ಅವಕಾಶ ನೀಡಿ, ತನ್ನ ಖಾತೆಗೆ 8 ಗೋಲ್ ಸೇರಿಸಿಕೊಂಡಿತು.
ತಂಡದ ನಾಯಕಿ ರಿಂಕಿ ಕುಜೂರ್ ಪಂದ್ಯದ 18ನೇ ನಿಮಿಷದಲ್ಲಿ ಬಾರಿಸಿದ ಮೊದಲ ಗೋಲು ಸೇರಿ ಎರಡು ಗೋಲುಗಳ ಕಾಣಿಕೆ ನೀಡಿದರೆ, ಜಾಹ್ನವಿ ಪ್ರಧಾನ್ ಮತ್ತು ರೋಜಿತ ಕುಜೂರ್ ತಲಾ ಎರಡು ಗೋಲು ಬಾರಿಸಿದರು. ಅಲ್ಲದೆ ರಹಿಲ್ ಟರ್ಕಿ ಮತ್ತು ಲಕ್ಷ್ಮಿ ಎಕ್ಕ ಅವರು ತಲಾ ಒಂದೊಂದು ಗೋಲು ಬಾರಿಸಿದರು. ಪಂದ್ಯದ ಮೊದಲಾರ್ಧ ವೇಳೆಯಲ್ಲಿಯೆ 0-3 ಅಂತರ ಕಾಯ್ದುಕೊಂಡಿದ್ದ ಒಡಿಶಾ ತಂಡ, ಉಳಿದಾರ್ಧದಲ್ಲಿ ಐದು ಗೋಲುಗಳನ್ನು ತನ್ನದಾಗಿಸಿಕೊಂಡಿತು. ಅತ್ತ ಅಸ್ಸಾಂ ಪರ ಮಾಕ್ಸಿಮ ಕ್ಷಲ್ಸೋ 48ನೇ ನಿಮಿಷದಲ್ಲಿ ಒಂದು ಗೋಲು ಬಾರಿದರು.
ಬಳಿಕ ಮುಖಾಮುಖಿಯಾದ ಕೇರಳ ಮತ್ತು ಪುದುಚೆರಿ ತಂಡಗಳ ಪೈಕಿ ಕೇರಳ ತಂಡವು 9-0 ಗೋಲುಗಳ ಅಂತರದಿಂದ ಜಯಗಳಿಸಿತು. ತಂಡದ ಅಮಲ್ ಥಾಮಸ್ ಬಾರಿಸಿದ ಮೂರು ಗೋಲುಗಳು ಕೇರಳಕ್ಕೆ ಹೆಚ್ಚು ಆಸರೆ ನೀಡಿತು. ಥಾಮಸ್ ಅವರು ಪಂದ್ಯದ ಆರಂಭವಾದ 3ನೇ ನಿಮಿಷದಲ್ಲಿ ಒಂದು ಗೋಲು ಬಾರಿಸಿ, ಅಂತೆಯೆ 46 ಮತ್ತು 54ನೇ ನಿಮಿಷದಲ್ಲಿ ಮತ್ತೆ ಚೆಂಡು ಗೋಲು ಅಂಗಳಕ್ಕೆ ನುಗ್ಗುವಂತೆ ಮಾಡಿದರು. ತಂಡದ ನಾಯಕಿ ವಿನ್ಯ ಅತಿಯೆದತ್ 32 ಮತ್ತು 42ನೇ ನಿಮಿಷದಲ್ಲಿ ಎರಡು ಗೋಲು ಬಾರಿಸಿದರೆ, ಅಪರ್ಣ ಜಯ್, ಕೆ. ಪ್ರತೀಕ್ಷ, ಕೆ. ಮೃತುಲ ರಾಜ್ ಮತ್ತು ಎಂ.ಆರ್. ಸಿಂಧು ತಲಾ ಒಂದೊಂದು ಗೋಲು ಬಾರಿಸಿದರು. ಪಂದ್ಯದ ಮೊದಲಾರ್ಧದಲ್ಲಿ 3-0 ಕಾಯ್ದುಕೊಂಡಿದ್ದ ಕೇರಳ ತಂಡ ದ್ವಿತೀಯಾರ್ಧದಲ್ಲಿ ಮತ್ತೆ ಆರು ಗೋಲು ಬಾರಿಸಿದರು.
ಮತ್ತೋಂದು ಸೋಲಿನ ಸುಳಿಯಲ್ಲಿ ಸಿಲುಕಿದ ಜಮ್ಮು ಮತ್ತು ಕಾಶ್ಮೀರ ತಂಡವು, ಆಂಧ್ರಪ್ರದೇಶದ ವಿರುದ್ಧ 6-0 ಅಂತರದಿಂದ ಸೋತಿತು. ಆಂಧ್ರ ತಂಡದ ಮಹೇಶ್ವರಿ ಬಾಲಂಗೊಂಡ ಮೂರು ಗೋಲು ಬಾರಿಸಿದರೆ, ಜ್ಯೋತಿ ಅಂಡಬಂಡ 2 ಗೋಲ್ ಮತ್ತು ಜ್ಯೋತಿ ಪಿಲ್ಲಿಗೋಯಲ ಒಂದು ಗೋಲು ಬಾರಿಸಿದರು. ಪಿಲ್ಲಿಗೋಯಲ ಬಾರಿಸಿದ ಗೋಲು ಮೊದಲ ಗೋಲಾಗಿತ್ತು. ಆಂಧ್ರ ತಂಡವು ಪಂದ್ಯದ ಮೊದಲಾರ್ಧದಲ್ಲಿ 2-0 ಅಂತರ ಕಾಯ್ದುಕೊಂಡು, ನಂತರ 4 ಗೋಲು ಸಂಪಾದಿಸಿತು.

ಪಂದ್ಯ ಇಪ್ಪತ್ತೆರಡು
ಜಮ್ಮು ಮತ್ತು ಕಾಶ್ಮೀರ ತಂಡವನ್ನು ಆಂಧ್ರಪ್ರದೇಶ ತಂಡ ಮಣಿಸಿತು 6-0
ಆಂಧ್ರಪ್ರದೇಶ ಗೋಲು ಸ್ಕೋರ್
ಜ್ಯೋತಿ ಪಿಲ್ಲಿಗೋಯಲ್- 17ನಿ.
ಮಹೇಶ್ವರಿ ಬಾಲಂಗೊಂಡ- 33, 54, 66ನಿ.
ಜ್ಯೋತಿ ಅಂಡಬಂಡ- 56, 60ನಿ.

ಪಂದ್ಯ ಇಪ್ಪತ್ಮೂರು
ಪಾಂಡಿಚೇರಿ ತಂಡ ಮಣಿಸಿದ ಕೇರಳ ತಂಡ 9-0
ಕೇರಳ ಗೋಲು ಸ್ಕೋರ್
ಅಮಲ್ ಥಾಮಸ್- 3, 46, 54ನಿ.
ಅಪರ್ಣ ಜಾಯ್- 10ನಿ.
ವಿನ್ಯ ಅತಿಯೆದತ್- 32, 42ನಿ.
ಕೆ. ಪ್ರತೀಕ್ಷ- 40ನಿ.
ಕೆ. ಮೃತುಲರಾಜ್- 67ನಿ.
ಎಂ.ಆರ್. ಸಿಂಧು- 69ನಿ.
ಪಂದ್ಯ ಇಪ್ಪತ್ನಾಲ್ಕು
ಅಸ್ಸಾಂ ಮಣಿಸಿದ ಒಡಿಶಾ 8-1
ಒರಿಸ್ಸಾ ಗೋಲು ಸ್ಕೋರ್
ರಿಂಕಿ ಕುಜೂರ್- 18, 40ನಿ.
ಜಾಹ್ನವಿ ಪ್ರಧಾನ್- 21, 31ನಿ.
ರೋಜಿತ ಕುಜೂರ್- 59, 62ನಿ.
ರಹೀಲ್ ಟರ್ಕಿ- 66ನಿ, ಲಕ್ಷ್ಮಿ ಎಕ್ಕ- 69ನಿ.
ಅಸ್ಸಾಂ ಗೋಲು ಸ್ಕೋರ್
ಮಾಕ್ಷಿಮ ಕ್ಷಲ್ಸೋ- 48ನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement