ಡೇವಿಸ್ ಕಪ್: ತಂಡದಲ್ಲಿ ಬದಲಾವಣೆ ಇಲ್ಲ
ನವದೆಹಲಿ: ಕಳೆದ ತಿಂಗಳು ಚೈನೀಸ್ ತೈಪೆ ವಿರುದ್ಧ ವೈಟ್ವಾಶ್ ಗೆಲವು ದಾಖಲಿಸಿದ್ದ ಭಾರತ ಡೇವಿಸ್ ಕಪ್ ತಂಡವನ್ನು, ಮುಂದಿನ ಏ.4-6ರವರೆಗೆ ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯಕ್ಕೂ ಮುಂದುವರಿಸಲು ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ) ನಿರ್ಧರಿಸಿದೆ.
ಸೋಮವಾರ ಎಐಟಿಎ ತಂಡವನ್ನು ಪ್ರಕಟಿಸಿದ್ದು, ತಂಡದಲ್ಲಿ ಯಾವುದೇ ಬದಲಾವಣೆ ಮಾಡಲು ಮುಂದಾಗಿಲ್ಲ. ಚೈನೀಸ್ ತೈಪೆ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದ ಸೋಮ್ದೇವ್ ದೇವವರ್ಮನ್, ಯುಕಿ ಭಾಂಬ್ರಿ, ರೋಹನ್ ಬೋಪಣ್ಣ, ಮತ್ತು ಸಕೇತ್ ಮೈನೆನಿ ಅವರನ್ನೇ ತಂಡದಲ್ಲಿ ಮುಂದುವರಿಸಿದೆ.
ಭಾರತ ತಂಡ ದಕ್ಷಿಣ ಕೊರಿಯಾ ವಿರುದ್ಧ ಗೆಲವು ದಾಖಲಿಸಿದರೆ, ವಿಶ್ವ ಗುಂಪಿನ ಪ್ಲೇ ಆಫ್ ಸುತ್ತಿನಲ್ಲಿ ಸ್ಥಾನ ಪಡೆಯಲಿದೆ.