ವೇಟ್‌ಲಿಫ್ಟಿಂಗ್: ಭಾರತಕ್ಕೆ ಐದು ಕಂಚಿನ ಪದಕ
ನವದೆಹಲಿ: ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿರುವ ಭಾರತದ ಕಿರಿಯ ವೇಯ್ಟ್‌ಲಿಫ್ಟರ್‌ಗಳು ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಐದು ಕಂಚಿನ ಪದಕ ಬಾಚಿಕೊಂಡಿದ್ದಾರೆ.
ಸೋಮವಾರ ಪಂದ್ಯಾವಳಿಯ ಎರಡನೇ ದಿನವಾಗಿದ್ದು, ಬಾಲಕರ 77ಕೆ.ಜಿ ವಿಭಾಗದಲ್ಲಿ ಕೊಜುಮ್ ತಾಬಾ ಕ್ಲೀನ್ ಹಾಗೂ ಜೆರ್ಕ್ ವಿಭಾಗದಲ್ಲಿ ಕಂಚಿನ ಪದಕ ಪಡೆದುಕೊಂಡರು.
ಕೊಜುಮ್ ಒಟ್ಟಾರೆಯಾಗಿ 285 ಕೆ.ಜಿ ಎತ್ತಿದ್ದಾರೆ. ಇನ್ನು ಬಾಲಕಿಯರ 63ಕೆ.ಜಿ ವಿಭಾಗದಲ್ಲಿ ಪೂನಮ್ ಯಾದವ್ ಸಹ ಕ್ಲೀನ್ ಹಾಗೂ ಜೆರ್ಕ್ ವಿಭಾಗದಲ್ಲಿ ಕಂಚಿನ ಪದಕ ಬಾಚಿಕೊಂಡರು. 53 ಕೆ.ಜಿ ವಿಭಾಗದಲ್ಲಿ ಹರ್ಷದೀಪ್ ಕೌರ್ ಒಟ್ಟಾರೆಯಾಗಿ 165 ಕೆ.ಜಿ ಎತ್ತುವ ಮೂಲಕ ನಾಲ್ಕನೇ ಸ್ಥಾನ ಪಡೆದರು.
ಇನ್ನು ಭಾನುವಾರ ನಡೆದ ಸ್ಪರ್ಧೆಯಲ್ಲಿ ಸೈಕೋಮ್ ಮೀರಾಬಾಯಿ ಚನು ಮೂರು ಬೆಳ್ಳಿ ಪದಕ ಪಡೆದಿದ್ದರು.