ಶ್ರೀನಾಥ್ ಮ್ಯಾಚ್ ರೆಫರಿ
ಮಾಜಿ ಆಟಗಾರ ಜಾವಗಲ್ ಶ್ರೀನಾಥ್ ಹಾಗೂ ಎಸ್. ರವಿ ಅವರು ಮಾರ್ಚ್ 16ರಿಂದ ಏಪ್ರಿಲ್..
ದುಬೈ: ಮಾಜಿ ಆಟಗಾರ ಜಾವಗಲ್ ಶ್ರೀನಾಥ್ ಹಾಗೂ ಎಸ್. ರವಿ ಅವರು ಮಾರ್ಚ್ 16ರಿಂದ ಏಪ್ರಿಲ್ 6ರ ವರೆಗೆ ನಡೆಯಲಿರುವ ಐಸಿಸಿ ವಿಶ್ವಕಪ್ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸುವವರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇಬ್ಬರು ಭಾರತೀಯರಾಗಿದ್ದಾರೆ.
ಅಂತಾರಾಷ್ಟೀಯ ಕ್ರಿಕೆಟ್ ಸಮಿತಿ (ಐಸಿಸಿ) ಸೋಮವಾರ ರೆಫರಿ ಮತ್ತು ಅಂಪೈರ್ಗಳ ಪಟ್ಟಿ ಬಿಡುಗಡೆ ಮಾಡಿದೆ. ಐಸಿಸಿ ಮ್ಯಾಚ್ ರೆಫರಿಗಳ ಎಲೈಟ್ ಪ್ಯಾನಲ್ನಲ್ಲಿ ಜಾವಗಲ್ ಶ್ರೀನಾಥ್ ಹೊರತಾಗಿ ಡೇವಿಡ್ ಬೂನ್, ರಂಜನ್ ಮದುಗಲೆ, ರೋಷನ್ ಮಹಾನಾಮ ಕೂಡ ಇದ್ದಾರೆ.
ಇನ್ನು ಮೈದಾನದ ಅಂಪೈರ್ಗಳಾಗಿ ಒಟ್ಟು 11 ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಎಸ್. ರವಿ ಅಲ್ಲದೆ, ಅಲೀಂ ದರ್, ಕುಮಾರ ಧರ್ಮಸೇನ, ಸ್ಟೀವ್ ಡೇವಿಸ್, ಮರಾಯಿಸ್ ಎರಸ್ಮುಸ್, ಇಯಾನ್ ಗೌಲ್ಡ್, ರಿಚರ್ಡ್ ಇಲ್ಲಿಂಗ್ವರ್ಥ್, ರಿಚರ್ಡ್ ಕೆಟೆಲ್ಬೊರೋ, ನಿಗೆಲ್ ಲಾಂಗ್, ಬ್ರೂಸ್ ಆಕ್ಷೆನ್ಫೋರ್ಡ್, ಪಾಲ್ ರೀಫೆಲ್, ರಾಡ್ ಟಕರ್, ಬಿಲ್ಲಿ ಬೌಡೆನ್, ಆರ್. ಮಾರ್ಟಿನೆಜ್ ಸ್ಥಾನ ಹೊಂದಿದ್ದಾರೆ.