'ಎ' ಗುಂಪಿನಲ್ಲಿ ಕರ್ನಾಟಕ
ಭೋಪಾಲ್: ನಾಲ್ಕನೇ ರಾಷ್ಟ್ರೀಯ ಸೀನಿಯರ್ ಮಹಿಳಾ ಹಾಕಿ ಚಾಂಪಿಯನ್ಶಿಪ್ ಗುರುವಾರದಿಂದ ಇಲ್ಲಿ ಆರಂಭವಾಗಲಿದ್ದು, ಕರ್ನಾಟಕ ತಂಡದ ಆಟಗಾರರು 'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ.
ಒಟ್ಟು 32 ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ. ಒಟ್ಟು 11 ದಿನಗಳ ಈ ಚಾಂಪಿಯನ್ಶಿಪ್ ಎರಡು ಹಂತಗಳಲ್ಲಿ ನಡೆಯಲಿದೆ. ತಂಡಗಳನ್ನು 'ಎ' ಮತ್ತು 'ಬಿ'ಗುಂಪುಗಳಲ್ಲಿ ವಿಭಜಿಸಲಾಗಿದೆ.