ಡೆವಿಲ್ಸ್ಗೆ ಹೊಸ ಚಿಹ್ನೆ
ನವದೆಹಲಿ: ಕಳೆದ ಬಾರಿಯ ಐಪಿಎಲ್ನ ಕಳಪೆ ಪ್ರದರ್ಶನದಿಂದ ಹೊರ ಬಂದು ಈ ಬಾರಿ ಉತ್ತಮ ಪ್ರದರ್ಶನ ನೀಡಲು ಸಿದ್ಧವಾಗಿರುವ ಡೆಲ್ಲಿ ಡೇರ್ಡೆವಿಲ್ಸ್ ತಂಡ ಹೊಸ ಚಿಹ್ನೆಯನ್ನು ಬಿಡುಗಡೆ ಮಾಡಿದೆ. ಜಿಎಮ್ಆರ್ ಒಡೆತನದ ಡೆಲ್ಲಿ ಡೇರ್ಡೆವಿಲ್ಸ್ ತಂಡ ಈ ಬಾರಿ ಹೊಸ ಬಣದೊಂದಿಗೆ ತನ್ನ ಚಿಹ್ನೆಯನ್ನೂ ಬದಲಿಸಿದ್ದು, ಬುಧವಾರ ಇದನ್ನು ಬಿಡುಗಡೆ ಮಾಡಲಾಯಿತು. ಈಡೀ ತಂಡಕ್ಕೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಡೆಲ್ಲಿ ಸಜ್ಜಾಗಿದ್ದು, ಮೊದಲ ಹೆಜ್ಜೆಯಾಗಿ ತಂಡದ ಚಿಹ್ನೆಯನ್ನು ಬಿಡುಗಡೆ ಮಾಡಿದೆ. ಅಲ್ಲದೆ ಶೀಘ್ರದಲ್ಲಿ ತಂಡದ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಲಾಗುವುದು. ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್ಸನ್ ಭಾರತಕ್ಕೆ ಆಗಮಿಸಿದ ನಂತರ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.