ಫೀಫಾ ವಿಶ್ವಕಪ್ ಟಿಕೆಟ್ ಮಾರಾಟ
ರಿಯೊ ಡಿ ಜನೈರೋ: ವಿಶ್ವ ಫುಟ್ಬಾಲ್ ಆಡಳಿತ ಮಂಡಳಿ ಫೀಫಾ ಮುಂಬರುವ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಅಂತಿಮ ಹಂತದ ಟಿಕೆಟ್ ಮಾರಾಟವನ್ನು ಆರಂಭಿಸಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗಿದೆ.
ಫೀಫಾ ಬುಧವಾರ ತನ್ನ ವೆಬ್ಸೈಟ್ನಲ್ಲಿ ಈ ಹಂತದ ಟಿಕೆಟ್ ಮಾರಾಟ ಆರಂಭಿಸಿತು. ಈ ಹಂತದಲ್ಲಿ ಗುಂಪು ಹಾಗೂ ನಾಕೌಟ್ ಹಂತದ ಸುಮಾರು 1,60,000 ಟಿಕೆಟ್ಗಳನ್ನು ಮಾರಾಟ ಮಾಡಲು ಫೀಫಾ ನಿರ್ಧರಿಸಿದೆ.
ವಿಶ್ವಕಪ್ನ ಏಳು ಪಂದ್ಯಗಳ ಟಿಕೆಟ್ಗಳು ಈಗಾಗಲೇ ಸಂಪೂರ್ಣವಾಗಿ ಮಾರಾಟವಾಗಿವೆ.
ಬ್ರೆಜಿಲ್-ಕ್ರೊವೆಶಿಯಾ, ಇಂಗ್ಲೆಂಡ್-ಇಟಲಿ, ಯುಎಸ್ಎ-ಪೊರ್ಚುಗಲ್, ಎರಡು ಕ್ವಾರ್ಟರ್ಫೈನಲ್, ಒಂದು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದ ಟಿಕೆಟ್ಗಳು ಮಾರಾಟವಾಗಿದೆ.
ಫೀಫಾ ನೀಡಿರುವ ಮಾಹಿತಿ ಪ್ರಕಾರ ಜೂ.12ರಿಂದ ಜುಲೈ 13ರವರೆಗೆ ನಡೆಯಲಿರುವ ವಿಶ್ವಕಪ್ಗೆ ಒಟ್ಟು 23 ಲಕ್ಷ ಟಿಕೆಟ್ಗಳನ್ನು ನಿಗದಿ ಪಡಿಸಲಾಗಿದೆ.