ಬಾಲಕನ ಶಿಕ್ಷಣಕ್ಕೆ ಸೆಹ್ವಾಗ್ ಸಹಾಯ ಹಸ್ತ
ನವದೆಹಲಿ: ಆರ್ಥಿಕ ಸಮಸ್ಯೆಯಿಂದ ಶಿಕ್ಷಣ ಪೂರೈಸಲು ಸಾಧ್ಯವಾಗದ 12 ವರ್ಷದ ಹುಡುಗನಿಗೆ ದೆಹಲಿಯ ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್, ಶಿಕ್ಷಣದ ವೆಚ್ಚವನ್ನು ಭರಿಸಲು ತೀರ್ಮಾನಿಸಿದ್ದಾರೆ. ಈ ಮೂಲಕ ಸೆಹ್ವಾಗ್ ಇತರರಿಗೆ ಸ್ಫೂರ್ತಿಯಾಗಿದ್ದಾರೆ.
ಘಜಿಯಾಬಾದ್ನ ರಿಶಬ್ ಎಂಬ ಹುಡುಗ ಆರ್ಥಿಕ ಸಮಸ್ಯೆಯಿಂದಾಗಿ ತೊಂದರೆ ಅನುಭವಿಸುತ್ತಿರುವುದನ್ನು ರೆಡಿಯೊ ಒಂದರಲ್ಲಿ ಕೇಳಿದ ಸೆಹ್ವಾಗ್, ಆತನಿಗೆ ನೆರವು ನೀಡಲು ಮುಂದಾಗಿದ್ದಾರೆ.
ನಾನು ಹಾಗೇ ರೆಡಿಯೊ ಕೇಳುವಾಗ ರಿಶಬ್ ಕತೆ ತಿಳಿಯಿತು. ನಂತರ ರೆಡಿಯೊ ಸ್ಟೇಷನ್ಗೆ ಕರೆ ಮಾಡಿ ಆತನ ಜವಾಬ್ದಾರಿಯನ್ನು ಹೊರುವುದಾಗಿ ತಿಳಿಸಿದೆ . ಇದು ನನ್ನ ಹಾಗೂ ಇತರರ ನೈತಿಕ ಕರ್ತ್ಯವ್ಯ ಎಂದು ಸೆಹ್ವಾಗ್ ತಿಳಿಸಿದ್ದಾರೆ.