ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಶೇಷ ಭಾರತಕ್ಕೆ ಗೆಲವು

Srinivasa Murthy VN
Updated On : 15 Mar 2014, 12:42 pm

ಹುಬ್ಬಳ್ಳಿ: ರಾಷ್ಟ್ರೀಯ ಅಂಗವಿಕಲರ ಕ್ರಿಕೆಟ್ 'ಡೆನ್ನಿಸನ್ ಟ್ರೋಫಿ 2014' ವಿಜೇತ ಪಶ್ಚಿಮ ಬಂಗಾಳ ವಿರುದ್ಧ ಶುಕ್ರವಾರ ಇಲ್ಲಿಯ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶೇಷ ಭಾರತ ತಂಡ ಎರಡು ವಿಕೆಟ್‌ಗಳ ಜಯ ಗಳಿಸಿದೆ.
ಟಾಸ್ ಗೆದ್ದು ಬ್ಯಾಟ್ ಮಾಡಿದ ಪಶ್ಚಿಮ ಬಂಗಾಳ, 12 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿತು. ಬಬನ್‌ಸಿಂಗ್ ಆಜೇಯ 34 ರನ್ ಗಳಿಸಿದರು. ಅಬ್ದುಲ್ ಖಲೇಕ್ (11) ಉತ್ತಮ ಸಾಥ್ ನೀಡಿದರು. ಶೇಷ ಭಾರತ ತಂಡದ ಅಜಯ ನಾಯ್ಡು 3 ವಿಕೆಟ್ ಕಬಳಿಸಿದರು.
ಉತ್ತರಿಸಿದ ಶೇಷ ಭಾರತ ಒಂದು ಎಸೆತ ಬಾಕಿ ಇರುವಂತೆ 8 ವಿಕೆಟ್ ನಷ್ಟಕ್ಕೆ 83 ರನ್ ಮಾಡಿ, ಗೆಲುವಿನ ನಗೆ ಬೀರಿತು. ಬ್ಯಾಟಿಂಗ್‌ನಲ್ಲೂ ಮಿಂಚಿದ ಅಜಯ ನಾಯ್ಡು ಬಿರುಸಿನ ಅಜೇಯ 27 ರನ್ ಗಳಿಸಿದರು. ಆಸಿತ್ ಜೈಸ್ವರ್ (16), ಅಲಿ ಅಹ್ಮದ್ (11), ಪ್ರದೀಪ ಭಡೋರಿಯಾ (11) ತಂಡದ ಗೆಲುವಿಗೆ ಕಾಣಿಕೆ ನೀಡಿದರು. ಬಬನ್ ಸಿಂಗ್ ಎರಡು ವಿಕೆಟ್ ಉರುಳಿಸಿದರು.
ಪ್ರಶಸ್ತಿ ಪ್ರದಾನ: 26ನೇ ರಾಷ್ಟ್ರೀಯ ಅಂಗವಿಕಲರ ಕ್ರಿಕೆಟ್ 'ಡೆನ್ನಿಸನ್ ಟ್ರೋಫಿ'ಯನ್ನು ಪಶ್ಚಿಮ ಬಂಗಾಳ ತಂಡಕ್ಕೆ ಹಾಗೂ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಆಂಧ್ರಪ್ರದೇಶ ತಂಡಕ್ಕೆ ವಿತರಿಸಲಾಯಿತು. ಪ್ರದೀಪ ಚಾಹಲ್ (ಹರ್ಯಾಣ) ಉತ್ತಮ ದಾಂಡಿಗ, ಅಬ್ದುಲ್ ಖಲೇಕ್ (ಪಶ್ಚಿಮ ಬಂಗಾಳ) ಉತ್ತಮ ಬೌಲರ್, ವೇದ ಪ್ರಕಾಶ (ಗುಜರಾತ್) ಉತ್ತಮ ಕ್ಷೇತ್ರ ರಕ್ಷಕ ಹಾಗೂ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಶ್ಚಿಮ ಬಂಗಾಳದ ಅಬ್ದುಲ್ ಖಲೇಕ್ ಪಡೆದುಕೊಂಡರು. ಪಶ್ಚಿಮ ಬಂಗಾಲ ಹಾಗೂ ಶೇಷ ಭಾರತ ತಂಡಗಳ ನಡುವಿನ ಪಂದ್ಯದಲ್ಲಿ ಆಂಧ್ರ ಪ್ರದೇಶದ ರೋಜಿ ರೆಡ್ಡೇರ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ ವಾಡೇಕರ್, ಡೆನ್ನಿಸನ್ ಗ್ರೂಪ್ ಆಫ್ ಹೊಟೇಲ್ಸ್ ನಿರ್ದೇಶಕಿ ದೀಪಾ ನಾಯಕ, ಬಿಡಿಕೆ ಸ್ಪೋರ್ಟ್ಸ್ ಪ್ರತಿಷ್ಠಾನದ ಮುಖ್ಯ ಧರ್ಮದರ್ಶಿ ಭರತ ಖಿಮಜಿ, ಮಾಜಿ ಟೆಸ್ಟ್ ಆಟಗಾರ ಉಮೇಶ ಕುಲಕರ್ಣಿ, ಅಶೋಕ ವಾಡೇಕರ್, ಬಾಬಾ ಭೂಸದ, ಜಗದೀಶ ಶೆಟ್ಟರ್, ಚನ್ನಬಸಪ್ಪ ಹಳ್ಯಾಳ ಹಾಗೂ ಸುಧೀರ ಗುಪ್ತಾ ಅತಿಥಿಗಳಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement