ಸಾನಿಯಾ-ಶೊಯೆಬ್ ಮಧ್ಯೆ ಬಿರುಕು ಮೂಡಿತೇ?
ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಕ್ರಿಕೆಟರ್ ಶೊಯೆಬ್ ಮಲಿಕ್ ಅವರ ವೈವಾಹಿಕ ಜೀವನ ಶೀಘ್ರದಲ್ಲೇ ಅತಂಯಗೊಳ್ಳಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ನವದೆಹಲಿ: ಭಾರತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಕ್ರಿಕೆಟರ್ ಶೊಯೆಬ್ ಮಲಿಕ್ ಅವರ ವೈವಾಹಿಕ ಜೀವನ ಶೀಘ್ರದಲ್ಲೇ ಅತಂಯಗೊಳ್ಳಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ವೆಬ್ಸೈಟ್ವೊಂದರ ವರದಿಯ ಪ್ರಕಾರ ಈ ಇಬ್ಬರ ನಡುವೆ ಬಿರುಕು ಕಾಣಿಸಿಕೊಂಡಿದ್ದು, ಈ ಇಬ್ಬರೂ ಶೀಘ್ರದಲ್ಲೇ ದೂರವಾಗಲಿದ್ದಾರೆ ಎಂದು ತಿಳಿಸಿದೆ.
ಅಲ್ಲದೆ ವರದಿಯಲ್ಲಿ ಸಾನಿಯಾ ಮಿರ್ಜಾ ಅವರು ಬಾಲಿವುಡ್ ನಟ ರಾಣಾ ದಗ್ಗುಬಟಿ ಅವರೊಂದಿಗೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ವದಂತಿಯ ಬಗ್ಗೆಯೂ ತಿಳಿಸಲಾಗಿದೆ.
ಆದರೆ ಇನ್ನೊಂದೆಡೆ ಸಾನಿಯಾ ತಂದೆ ಇಮ್ರಾನ್ ಮಿರ್ಜಾ ಈ ವರದಿಯನ್ನು ತಳ್ಳಿಹಾಕಿದ್ದಾರೆ. ಸಾನಿಯಾ ಹಾಗೂ ಶೊಯೆಬ್ ಇಬ್ಬರೂ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಅವರಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ಈ ವರದಿಯಲ್ಲಿ ಸತ್ಯಾಂಶವಿಲ್ಲ. ಇದರಲ್ಲಿ ಕೇವಲ ಊಹಾಪೋಹಗಳಿವೆ. ಶೊಯೆಬ್ ಇತ್ತೀಚೆಗೆ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ವೇಳೆ ಸಾನಿಯಾ ಪಂದ್ಯವನ್ನು ನೇರವಾಗಿ ವೀಕ್ಷಿಸಿದ್ದರು. ಆದರೆ ಈ ಇಬ್ಬರೂ ಮಾಧ್ಯಮಗಳ ಮುಂದೆ ಒಟ್ಟಿಗೆ ಕಾಣಿಸಿಕೊಳ್ಳದಿರುವುದರಿಂದ ಈ ರೀತಿಯಾದ ವದಂತಿಗಳು ಹಬ್ಬಿವೆ ಎಂದು ತಿಳಿಸಿದ್ದಾರೆ.