ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಎಡಿಇಗೆ ಅಧಿಕಾರಯುತ ಜಯ

Srinivasa Murthy VN
Updated On : 8 May 2014, 11:50 am

ಬೆಂಗಳೂರು: ಉತ್ತಮ ಆಟ ಪ್ರದರ್ಶಿಸಿದ ಎಡಿಇ ತಂಡದ ಆಟಗಾರರು ರಾಜ್ಯ ಸೂಪರ್ ಡಿವಿಜನ್ ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ರೋಚಕ ಗೆಲವು ದಾಖಲಿಸಿದ್ದಾರೆ.
ಅಶೋಕನಗರದಲ್ಲಿರುವ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎಡಿಇ ತಂಡ 1-0 ಗೋಲಿನಿಂದ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡವನ್ನು ಪರಾಭವಗೊಳಿಸಿದರು.
ಪಂದ್ಯದ 45ನೇ ನಿಮಿಷದಲ್ಲಿ ರಾಜ್‌ಕಿರಣ್ ಆಕರ್ಷಕ ಗೋಲು ಗಳಿಸಿ ಎಡಿಇ ತಂಡದ ಜಯಭೇರಿಗೆ ಕಾರಣರಾದರು.
ಈ ಮಧ್ಯೆ ಎಡಿಇ ತಂಡ ಪಂದ್ಯದ 32ನೇ ನಿಮಿಷದಿಂದ ಒಬ್ಬ ಆಟಗಾರನ ಕೊರತೆಯಲ್ಲಿಯೇ ಹೋರಾಟ ನಡೆಸಿತು. ತಂಡದ ಆಟಗಾರ ಕಾರ್ತಿಕ್ ಅವರು ಎರಡು ಹಳದಿ ಕಾರ್ಡ್ ಪಡೆಯುವ ಮೂಲಕ ಮೈದಾನದಿಂದ ಹೊರನಡೆಯಬೇಕಾಯಿತು. ಹಾಗಾಗಿ, 10 ಆಟಗಾರರಿಂದಲೇ ಎಡಿಇ ಮುಂದಿನ ಸವಾಲಿನೊಂದಿಗೆ ಸಾಗಿದರೆ, ಇದರ ಲಾಭ ಪಡೆದುಕೊಳ್ಳುವಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡ ವಿಫಲವಾಯಿತು.
ಸ್ಟುಡೆಂಟ್ ಯೂನಿಯನ್ ಗೆಲವು: ಇಂದೇ ನಡೆದ 'ಎ' ಡಿವಿಜನ್ ಲೀಗ್ ಪಂದ್ಯದಲ್ಲಿ ಸ್ಟುಡೆಂಟ್ ಯೂನಿಯನ್ ತಂಡ 2-1 ಗೋಲುಗಳಿಂದ ಬೆಂಗಳೂರು ಯುನೈಟೆಡ್ ಫುಟ್ಬಾಲ್ ಕ್ಲಬ್ ತಂಡವನ್ನು ಸೋಲಿಸಿತು.
ವಿಜೇತ ಸ್ಟುಡೆಂಟ್ ಯೂನಿಯನ್ ಪರ ಮಿತೇಶ್ 12ನೇ ನಿಮಿಷ ಮತ್ತು ಅಬೂಬ್ಕರ್ 75ನೇ ನಿಮಿಷಗಳಲ್ಲಿ ಗೋಲು ಸಂಪಾದಿಸಿದರು. ಬಿಯುಎಫ್‌ಸಿ ಪರ ಕ್ಲಿವರ್ಟ್ 30ನೇ ನಿಮಿಷದಲ್ಲಿ ಗೋಲುಗಳಿಸಿದ್ದು ವ್ಯರ್ಥವಾಯಿತು.
ಶುಕ್ರವಾರ ನಡೆಯಲಿರುವ 'ಎ' ಡಿವಿಜನ್ ಲೀಗ್ ಪಂದ್ಯದಲ್ಲಿ ಸಾಯ್ ಮತ್ತು ಪೋಸ್ಟಲ್ ಹಾಗೂ ಸೂಪರ್ ಡಿವಿಜನ್ ಲೀಗ್ ಪಂದ್ಯದಲ್ಲಿ ಎಚ್‌ಎಎಲ್ ಮತ್ತು ರೇಲ್ ವೀಲ್ ಫ್ಯಾಕ್ಟರಿ ತಂಡಗಳು ಮುಖಾಮುಖಿಯಾಗಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement