ಕಲಿಕೆಯ ಅನುಭವ
ನವದೆಹಲಿ: ಇತ್ತೀಚೆಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ಅಜಿಂಕ್ಯ ರಹಾನೆ, ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡುವಾಗ ಪ್ರತಿದಿನವೂ ಹೊಸ ಅಂಶಗಳನ್ನು ಕಲಿಯುತ್ತಿದ್ದು, ಉತ್ತಮ ಕಲಿಕೆಯ ಅನುಭವ ಹೊಂದುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ನಾನು ಸಾಕಷ್ಟು ಅಂಶಗಳನ್ನು ಕಲಿತಿದ್ದೇನೆ. ಕಳೆದ ವರ್ಷದ ಐಪಿಎಲ್ನಲ್ಲಿನ ಪ್ರದರ್ಶನದಿಂದ ಹೆಚ್ಚಿನ ಆತ್ಮ ವಿಶ್ವಾಸ ದೊರೆತಿತ್ತು. ಹಾಗಾಗಿ ವಿಶ್ವದ ಪ್ರಮುಖ ಬೌಲರ್ಗಳನ್ನು ಎದುರಿಸಲು ನೆರವಾಯಿತು. ಇನ್ನು ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಪ್ರವಾಸ ನನ್ನ ಪಾಲಿಗೆ ಮಹತ್ವವಾಗಿತ್ತು. ಅಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ಸಮಾಧಾನ ತಂದಿದೆ ಎಂದು ರಹಾನೆ ಅಭಿಪ್ರಾಯಪಟ್ಟರು. ವಿದೇಶಿ ಪ್ರವಾಸದಲ್ಲಿ ವಿಭಿನ್ನ ವಾತಾವರಣ ಹಾಗೂ ವಿಭಿನ್ನ ಸವಾಲುಗಳು ಎದುರಾಗಲಿದ್ದು, ಈ ಪ್ರವಾಸಗಳು ಹೆಚ್ಚು ಮಹತ್ವದ್ದಾಗಿರುತ್ತದೆ ಎಂದರು.