ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕ್ವಾರ್ಟರ್‌ಫೈನಲ್‌ನಲ್ಲಿ ಸಾನಿಯಾ-ಕಾರಾ ಜೋಡಿಗೆ ಸೋಲು

Srinivasa Murthy VN
Updated On : 8 May 2014, 11:49 am

ಮ್ಯಾಡ್ರಿಡ್ (ಸ್ಪೇನ್): ಭಾರತದ ಸಾನಿಯಾ ಮಿರ್ಜಾ ಮತ್ತು ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಜೋಡಿ ಸ್ಪೇನ್‌ನಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ಕಣದಿಂದ ನಿರ್ಗಮಿಸಿದೆ.
ಗುರುವಾರ ಇಲ್ಲಿ ನಡೆದ ಡಬಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸಾನಿಯಾ ಮತ್ತು ಕಾರಾ 7-5, 1-6, 8-10 ಸೆಟ್‌ಗಳಿಂದ ಚೀನಾದ ಶಾಯಿ ಪೆಂಗ್ ಮತ್ತು ತೈವಾನ್‌ನ ಸಿಯೆ ಸು-ವೀ ಜೋಡಿ ಎದುರು ತಲೆಬಾಗಿಸಿದರು.
ಐದನೇ ಶ್ರೇಯಾಂಕಿತ ಭಾರತ-ಜಿಂಬಾಬ್ವೆ ಜೋಡಿ ಮೊದಲ ಸೆಟ್ ಅನ್ನು ರೋಚಕವಾಗಿ ಗೆದ್ದುಕೊಂಡು ಶುಭಾರಂಭ ಮಾಡಿತು. ಆದರೆ, ನಂತರದ ಎರಡೂ ಸೆಟ್‌ಗಳಲ್ಲಿ ಉತ್ತಮ ಹೋರಾಟ ನೀಡಲು ವಿಫಲವಾಯಿತು.
ಒಂದು ಗಂಟೆ 30 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಾನಿಯಾ ಮತ್ತು ಕಾರಾ ನಾಲ್ಕು ಬ್ರೇಕ್ ಅವಕಾಶಗಳನ್ನು ಅಂಕಗಳನ್ನಾಗಿ ಪರಿವರ್ತಿಸಿದರೆ, ಎದುರಾಳಿ ಜೋಡಿ 5 ಬಾರಿ ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿತು. ಇತ್ತೀಚೆಗಷ್ಟೇ ನಡೆದ ಪೋರ್ಚುಗಲ್ ಓಪನ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಭಾರತ-ಜಿಂಬಾಬ್ವೆ ಜೋಡಿ ಇಲ್ಲಿ ವಿಫಲವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement