ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಿಶ್ವ ಫುಟ್ಬಾಲ್ ರ್ಯಾಂಕಿಂಗ್ ಭಾರತಕ್ಕೆ 147ನೇ ಸ್ಥಾನ

Srinivasa Murthy VN
Updated On : 8 May 2014, 11:50 am

ನವದೆಹಲಿ: ಈ ಸಾಲಿನ ಮಾರ್ಚ್‌ನಿಂದಲೂ ಪಂದ್ಯದಿಂದ ವಂಚಿತರಾಗಿರುವ ಭಾರತ ತಂಡ ನೂತನ ಫೀಫಾ ಜಾಗತಿಕ ಫುಟ್ಬಾಲ್ ರ್ಯಾಂಕಿಂಗ್‌ನಲ್ಲಿ ಎರಡು ಸ್ಥಾನ ಕುಸಿದಿದ್ದು, 147ಕ್ಕೆ ತಲುಪಿದೆ.
ವಿಮ್ ಕೋವರ್ಮನ್ಸ್ ಗರಡಿಯಲ್ಲಿ ಪಳಗುತ್ತಿರುವ ಭಾರತದ ಹುಡುಗಳು ಉಪಖಂಡದ ರ್ಯಾಂಕಿಂಗ್‌ನಲ್ಲಿ ಮಾತ್ರ ತಮ್ಮ 25ನೇ ಸ್ಥಾನವನ್ನು ಕಾಪಾಡಿಕೊಂಡಿದ್ದಾರೆ.
ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ, ಸಿಂಗಾಪುರ ಜೊತೆ ಜಂಟಿ 147ನೇ ಸ್ಥಾನದ ಗೌರವ ಪಡೆದಿದೆ. ಉಪಖಂಡಗಳ ಪೈಕಿ ಅಫ್ಘಾನಿಸ್ತಾನ (128ನೇ) ಉನ್ನತ ಸ್ಥಾನ ಪಡೆದಿದೆ.
ಆದರೆ, ಏಷ್ಯಾ ಮಟ್ಟದಲ್ಲಿ ಇರಾನ್ (37) ಅಗ್ರಸ್ಥಾನದಲ್ಲಿರುವ ತಂಡವಾಗಿದೆ. ಜಪಾನ್ (47) ಮತ್ತು ಉಜ್ಬೇಕಿಸ್ತಾನ (53) ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.
ಈ ಸಾಲಿನಲ್ಲಿ ಭಾರತ ಕೇವಲ ಒಂದು ಪಂದ್ಯವನ್ನಾಡಿದ್ದು, ಬಾಂಗ್ಲಾದೇಶ ವಿರುದ್ಧ ಕಳೆದ ಮಾರ್ಚ್ 5ರಂದು ನಡೆದ ಸ್ನೇಹ ಸರಣಿಯ ಪಂದ್ಯದಲ್ಲಿ 2-2 ಗೋಲುಗಳಿಂದ ಡ್ರಾ ಸಾಧಿಸಿತ್ತು.
ಈ ಮಧ್ಯೆ ಸ್ಪೇನ್ ವಿಶ್ವದ ನಂಬರ್ ಒನ್ ತಂಡವಾಗಿ ಮುನ್ನಡೆದಿದ್ದರೆ, ಜರ್ಮನಿ ಮತ್ತು ಪೋರ್ಚುಗಲ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ. ಈ ಬಾರಿಯ ವಿಶ್ವಕಪ್ ಆತಿಥ್ಯ ವಹಿಸಿರುವ ಬ್ರೆಜಿಲ್ ನಾಲ್ಕನೇ ಸ್ಥಾನಕ್ಕೆ ನೂಕಲ್ಪಟ್ಟಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement