ಉದಯೋನ್ಮುಖ ಪ್ರತಿಭೆಗೆ 10 ಲಕ್ಷ
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ 7ನೇ ಆವೃತ್ತಿಯಲ್ಲಿ ಯುವ ಆಟಗಾರರಿಗೊಂದು ಸಂತಸದ ಸುದ್ದಿ ಹೊರಬಿದ್ದಿದೆ.
ಕಾರಣ, ಪಂದ್ಯಾವಳಿಯಲ್ಲಿ ಉದಯೋನ್ಮುಖ ಆಟಗಾರನಾಗಿ ಹೊರಹೊಮ್ಮುವ ಪ್ರತಿಭೆಗೆ ಪಂದ್ಯಾವಳಿಯ ಪ್ರಾಯೋಜಕತ್ವ ವಹಿಸಿಕೊಂಡಿರುವ ಪೆಪ್ಸಿ ಕಂಪನಿ ರು. 10 ಲಕ್ಷ ಬಹುಮಾನವನ್ನು ಪ್ರಕಟಿಸಿದೆ.
ಪಂದ್ಯಾವಳಿಯಲ್ಲಿ ಅರಳುತ್ತಿರುವ ಪ್ರತಿಭೆಗಳನ್ನು ಬೆಂಬಲಿಸಲು ಪೆಪ್ಸಿ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪಂದ್ಯಾವಳಿಯಲ್ಲಿ ಭಾಗವಹಿಸಿರುವ 26 ವರ್ಷದೊಳಗಿನ ಆಟಗಾರರು ತಾವು ಆಡಿರುವ ಆಟಗಾರ, ಐದು ಏಕದಿನ ಪಂದ್ಯಗಳನ್ನು ಆಡಿರುವ ಆಟಗಾರ ಹಾಗೂ 25 ಅಥವಾ ಅದಕ್ಕಿಂತ ಕಡಿಮೆ ಐಪಿಎಲ್ ಪಂದ್ಯಗಳನ್ನು ಆಡಿರುವ ಆಟಗಾರರು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.
ಪಂದ್ಯಾವಳಿಯ ಅಂತ್ಯದಲ್ಲಿ ಸಾರ್ವಜನಿಕರ ಮತದಾನ ಮತ್ತು ಕಾಮೆಂಟೇಟರ್ ಆಯ್ಕೆ ಮೂಲಕ ಪ್ರಶಸ್ತಿಗೆ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ.