ಏಷ್ಯನ್ ಜೂ. ಅಥ್ಲೆಟಿಕ್ಸ್ಗೆ ಶರ್ವಣ್ ಖರ್ಬ್ ಅರ್ಹತೆ
ಚೆನ್ನೈ: ಹರ್ಯಾಣ ಮೂಲದ ಶರ್ವಣ್ ಖರ್ಬ್ ಇಲ್ಲಿ ನಡೆಯುತ್ತಿರುವ 12ನೇ ಫೆಡರೇಷನ್ ಕಪ್ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ಶಿಪ್ನ 500 ಮೀಟರ್ ಓಟದ ಸ್ಪರ್ಧೆಯನ್ನು ಗೆದ್ದುಕೊಳ್ಳುವ ಮೂಲಕ ಮುಂದಿನ ಏಷ್ಯನ್ ಜೂನಿಯರ್ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ ನಡೆದ ಈ ಸ್ಪರ್ಧೆಯಲ್ಲಿ ಶರ್ವಣ್ ಖರ್ಬ್ 14:54.51 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ ಮೊದಲಿಗರಾಗುವ ಮೂಲಕ ಈ ಸಾಧನೆ ಮಾಡಿದರು.
ಉಳಿದಂತೆ, ಪಂಜಾಬ್ನ ಜತಿಂದರ್ ಕುಮಾರ್ (14:55.24ಸೆ.) ಬೆಳ್ಳಿ ಪದಕ ಗೆದ್ದುಕೊಂಡರೆ, ಕಳೆದ ವರ್ಷದ ಏಷ್ಯನ್ ಯೂತ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ಅಭಿಷೇಕ್ 14:56.23 ಸೆಕೆಂಡುಗಳ ಸಾಧನೆಯೊಂದಿಗೆ ಮೂರನೇ ಸ್ಥಾನ ಪಡೆದರು. ಮಹಿಳೆಯರ ವಿಭಾಗದ 5000 ಮೀ. ಓಟದ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಸಂಜಿವಣಿ ಜಾಧವ್ ಚಿನ್ನದ ಪದಕ ಜಯಿಸಿದರು. 17:11.27 ಸೆ. ಗಳಲ್ಲಿ ಗುರಿ ಕ್ರಮಿಸಿ ಈ ಸಾಧನೆ ಮಾಡಿದರು.