ದೇಹದಾರ್ಢ್ಯ ವಿಚಾರ ಸಂಕಿರಣ
ಬೆಂಗಳೂರು: ಯುವಕರಲ್ಲಿ ದೇಹದಾರ್ಢ್ಯದ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಸಂಸ್ಥೆ ಮಸಲ್ಮೇನಿಯಾ, ಇಂದು ವಿಚಾರ ಸಂಕಿರಣವನ್ನು ಆಯೋಜಿಸಿದೆ.
ಈ ಕುರಿತು ಪ್ರತಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಸಲ್ಮೇನಿಯಾ ಸಂಚಾಲಕ ಅಮೃತ್, ನಗರದ ದಯಾನಂದ ಕಾಲೇಜಿನಲ್ಲಿ ಈ ವಿಚಾರ ಸಂಕಿರಣವನ್ನು ಆಯೋಜಿಸುತ್ತಿದ್ದು, ಸಂಜೆ ನಾಲ್ಕು ಗಂಟೆಗೆ ನಡೆಯಲಿದೆ. ಈ ವಿಚಾರ ಸಂಕಿರಣದಲ್ಲಿ ಸುಮಾರು 250ಕ್ಕೂ ಹೆಚ್ಚು ದೇಹದಾಢ್ಯ ಸ್ಪರ್ಧಿಗಳು ಹಾಗೂ ಆಸಕ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಖ್ಯಾತ ದೇಹದಾಢ್ಯ ಸ್ಪರ್ಧಿಗಳಾದ ಅಮೆರಿಕಾದ ಎಮ್.ಎಮ್ ಪ್ರೊಸ್ ಯುಲಿಸೆಸ್, ಜಸಿಕಾ ಹಾಗೂ ಇಂಗ್ಲೆಂಡ್ನ ಸಿಮಿಯಾನ್ ಉಪಸ್ಥಿತರಿದ್ದರು. ಈ ಮಧ್ಯೆ ಮಸಲ್ಮೇನಿಯಾ ವತಿಯಿಂದ ಕಾಕ್ಸ್ಟೌನ್ನಲ್ಲಿನ ಅನಾಥ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.