ನಮ್ಮದು ಉತ್ತಮ ಬೌಲಿಂಗ್ ಪಡೆ
ಅಹ್ಮದಾಬಾದ್: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗೆಲವಿನ ರೂವಾರಿಯಾಗಿರುವ ಸನ್ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಭುವನೇಶ್ವರ್ ಕುಮಾರ್, ನಮ್ಮ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಪಂದ್ಯದಲ್ಲಿನ ಪ್ರದರ್ಶನ ಅಗತ್ಯ ಸಮಯದಲ್ಲಿ ಬಂದಿರುವುದು ಹೆಚ್ಚಿನ ಸಂತಸ ತಂದಿದೆ. ನಮ್ಮ ಆತ್ಮ ವಿಶ್ವಾಸ ಸ್ವಲ್ಪ ಕೆಳಮಟ್ಟದಲ್ಲಿತ್ತು. ಈ ಪಂದ್ಯದ ಗೆಲವಿನ ನಂತರ ಆತ್ಮ ವಿಶ್ವಾಸ ಹೆಚ್ಚಿದೆ. ಹಾಗಾಗಿ ಪಂದ್ಯಾವಳಿಯ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ನೆರವಾಗಲಿದೆ ಎಂದು ತಿಳಿಸಿದ್ದಾರೆ.
ನಮ್ಮ ತಂಡದ ಬೌಲಿಂಗ್ ವಿಭಾಗ ಐಪಿಎಲ್ನಲ್ಲಿ ಅತ್ಯುತ್ತಮ ಪಡೆಯಾಗಿದೆ. ಪಂದ್ಯಾವಳಿಯಲ್ಲಿ ಇನ್ನು ಹೆಚ್ಚಿನ ಪಂದ್ಯಗಳು ಬಾಕಿ ಉಳಿದಿದ್ದು, ಇತ್ತಮ ಪ್ರದರ್ಶನದಿಂದ ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನ ಪಡೆಯುವ ವಿಶ್ವಾಸವಿದೆ ಎಂದು ಭುವಿ ತಿಳಿಸಿದ್ದಾರೆ.
ಈ ಗೆಲವು ತಂಡದ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಮುಂದಿನ ಪಂದ್ಯಗಳಿಗೆ ಈ ಗೆಲವು ಸ್ಫೂರ್ತಿ ನೀಡಲಿದೆ. ಡೇಲ್ ಸ್ಟೇಯ್ನ್ ಹಾಗೂ ನಾನು ತಂಡಕ್ಕೆ ಉತ್ತಮ ಆರಂಭ ನೀಡಿದ್ದಾರೆ. ನಂತರ ಕರಣ್ ಶರ್ಮಾ ಹಾಗೂ ಅಮಿತ್ ಮಿಶ್ರಾ ಇನಿಂಗ್ಸ್ನ ಮಧ್ಯಭಾಗದಲ್ಲಿ ಎದುರಾಳಿ ಬ್ಯಾಟ್ಸ್ಮನ್ಗಲನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಹಾಗಾಗಿ ಗೆಲವು ನಮ್ಮ ಪಾಲಾಗಲು ಸಾಧ್ಯವಾಯಿತು ಎಂದರು.