ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪುರುಷರ ಫುಟ್ಬಾಲ್ ತಂಡಕ್ಕೆ ಮೊದಲ ಮಹಿಳಾ ಕೋಚ್

Srinivasa Murthy VN
Updated On : 9 May 2014, 11:16 am

ಪ್ಯಾರಿಸ್: ಫ್ರಾನ್ಸ್‌ನ ಎರಡನೇ ಡಿವಿಷನ್ ಫುಟ್ಬಾಲ್ ಕ್ಲಬ್‌ವೊಂದು ಪುರುಷರ ತಂಡಕ್ಕೆ ಹೆಲೆನಾ ಕೊಸ್ಟಾ ಅವರನ್ನು ಕೋಚ್ ಆಗಿ ಆಯ್ಕೆ ಮಾಡಿದ್ದು, ಪುರುಷರ ವೃತ್ತಿಪರ ಫುಟ್ಬಾಲ್ ಕ್ಲಬ್‌ಗೆ ಮಹಿಳಾ ತರಬೇತುದಾರರನ್ನು ಮೊದಲ ಬಾರಿಗೆ ನೇಮಕ ಮಾಡಿದ ಖ್ಯಾತಿ ಗಳಿಸಿದೆ.
ಕ್ಲೆರ್ಮೊಂಟ್ ಫುಟ್ಬಾಲ್ ಕ್ಲಬ್ ಬುಧವಾರ ತಮ್ಮ ವೆಬ್‌ಸೈಟ್‌ನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದು, ಮುಂದಿನ ಋತುವಿನಲ್ಲಿ ತಂಡಕ್ಕೆ ಹೆಲೆನಾ ಅವರನ್ನು ಕೋಚ್ ಆಗಿ ಆಯ್ಕೆ ಮಾಡಲಾಗಿದೆ. ಈ ನಿರ್ಧಾರದಿಂದ ಕ್ಲೆರ್ಮೊಂಟ್ ಫುಟ್ಬಾಲ್‌ನಲ್ಲಿ ಹೊಸ ಆಯಾಮಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ತಿಳಿಸಲಾಗಿದೆ. 36 ವರ್ಷದ ಪೊರ್ಚುಗೀಸ್‌ನ ಕೊಸ್ಟಾ ಅವರು ಈ ಹಿಂದೆ ಕತಾರ್ ಹಾಗೂ ಇರಾನ್ ರಾಷ್ಟ್ರೀಯ ಮಹಿಳಾ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಕೊಸ್ಟಾ ಅವರು ಈಗಾಗಲೇ ಪುರುಷರ ತಂಡದೊಂದಿಗೆ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿದ್ದಾರೆ. ಹಾಗಾಗಿ ಆಕೆ ತಂಡವನ್ನು ಮುನ್ನಡೆಸಲು ಯಾವುದೇ ಸಮಸ್ಯೆಗಳಿಲ್ಲ. ಇದು ಹೊಸದಾಗಿ ಕಾಣಬಹುದು. ಆದರೆಕಾಲಕ್ರಮೇಣ ಈ ಪ್ರಯೋಗ ಯಶಸ್ವಿಯಾದರೆ, ಎಲ್ಲವೂ ಸರಾಗವಾಗಲಿದೆ ಎಂದು ಕ್ಲಬ್ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement