ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬ್ರೆಜಿಲ್ ವಿಶ್ವಕಪ್ ತಂಡದಿಂದ ರೊನಾಲ್ಡಿನೊ, ಕಾಕಾ ಹೊರಕ್ಕೆ

Srinivasa Murthy VN
Updated On : 9 May 2014, 11:17 am

ಬ್ರೆಜಿಲ್: ಮುಂಬರುವ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗೆ ಬ್ರೆಜಿಲ್ ತಂಡವನ್ನು ಪ್ರಕಟಿಸಲಾಗಿದ್ದು, ಈ ತಂಡದಲ್ಲಿ ಖ್ಯಾತ ಆಟಗಾರರಾದ ರೊನಾಲ್ಡಿನೊ ಹಾಗೂ ಕಾಕಾ ಅವರು ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಬ್ರೆಜಿಲ್ ತಂಡದ ಮುಖ್ಯ ಕೋಚ್ ಲ್ಯೂಜ್ ಫೆಲಿಪೆ ಸ್ಕೊಲಾರಿ ಬುಧವಾರ 23 ಆಟಗಾರರ ತಂಡವನ್ನು ಪ್ರಕಟಿಸಿದ್ದು, 2013ರಲ್ಲಿ ಕಾನ್ಫೆಡರೆಷನ್ಸ್ ಪ್ರಶಸ್ತಿ ಗೆದ್ದ ತಂಡವನ್ನೇ, ವಿಶ್ವಕಪ್‌ಗೂ ಮುಂದುವರಿಸಲು ನಿರ್ಧರಿಸಿದ್ದಾರೆ.
ಬಾರ್ಸಿಲೋನಾದ ಮಾಜಿ ತಾರೆ ರೊನಾಲ್ಡಿನೊ ಬ್ರೆಜಿಲ್‌ನ ಅಟ್ಲೆಟಿಕೊ ಮಿನೈರೊ ಫುಟ್ಬಾಲ್ ಕ್ಲಬ್ ಪರ ಫಾರ್ಮ್ ಹಾಗೂ ಫಿಟ್ನೆಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಜೂ.12ರಿಂದ ಜು.13ರವರೆಗೆ ನಡೆಯಲಿರುವ ವಿಶ್ವಕಪ್‌ಗೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಾರೆ. ಇನ್ನು ಕಾಕಾ ಸಹ ತಮ್ಮ ನಾಲ್ಕನೇ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಸಾಕಷ್ಟು ಜನರ ಅಭಿಪ್ರಾಯವನ್ನು ಸಂಗ್ರಹಿಸಿರುವ ಮೂಲಕ 23 ಆಟಗಾರರ ತಂಡವನ್ನು ಆಯ್ಕೆ ಮಾಡಿದ್ದೇವೆ. ಈ ತಂಡ ವಿಶ್ವಕಪ್ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಬ್ರೆಜಿಲ್ ತಂಡ ಜೂ.12ರಂದು ಕ್ರೊವೆಶಿಯಾ ವಿರುದ್ಧ ತಮ್ಮ ಮೊದಲ ಪಂದ್ಯವನ್ನಾಡಲಿದೆ.
ಕ್ರೊವೆಶಿಯಾ ವಿರುದ್ಧದ ಪಂದ್ಯ ಪ್ರಮುಖವಾಗಿದೆ. ಪಂದ್ಯಾವಳಿಯಲ್ಲಿ ಉತ್ತಮ ಆರಂಭ ಮಾಡಿದರೆ ಮಾತ್ರ ಪ್ರಶಸ್ತಿ ಗೆಲ್ಲುವ ಹಾದಿ ಸುಗಮವಾಗಲಿದೆ ಎಂದು ಸ್ಕೊಲಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement