ಮಿಲ್ಲರ್ ಮೋಡಿ: ಸೋತ ಆರ್‌ಸಿಬಿ
ಕಿಂಗ್ಸ್ ಇಲೆವೆನ್ ಪಂಜಾಬ್, ತವರಿನ ಅಂಗಣದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 32 ರನ್‌ಗಳ ಅಂತರದಿಂದ ಹೆಡೆಮರಿ ಕಟ್ಟಿತು.
-ಮಲ್ಲಿಕಾರ್ಜುನ ಕರಿಯಪ್ಪನವರ
ಬೆಂಗಳೂರು: ಅಭಿಮಾನಿಗಳು ಅಂದುಕೊಂಡಿದ್ದ ಎರಡು ಅಂಶಗಳು ಸುಳ್ಳಾದವು. ಮೊದಲನೆಯದು ಅವರು ಅಂದುಕೊಂಡಂತೆ ಉದ್ಯಾನ ನಗರಕ್ಕೆ ತಂಪೆರೆದಿದ್ದ ವರುಣ ಪಂದ್ಯದ ಸಮಯದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಮತ್ತೊಂದು ರನ್ ಮಳೆ ಸುರಿಸುತ್ತಾರೆ ಎಂದು ನಂಬಿಕೊಂಡಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್‌ಮನ್ ಮ್ಯಾಕ್ಸ್‌ವೆಲ್ ಅಭಿಮಾನಿಗಳ ನಿರೀಕ್ಷೆಯನ್ನು ಇಲ್ಲಿ ಹುಸಿಯಾಗಿಸಿದರು.
ಮ್ಯಾಕ್ಸ್‌ವೆಲ್ ವೈಫಲ್ಯದ ಹೊರತಾಗಿಯೂ, ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲಿ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತರೂ ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್, ತವರಿನ ಅಂಗಣದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 32 ರನ್‌ಗಳ ಅಂತರದಿಂದ ಹೆಡೆಮರಿ ಕಟ್ಟಿತು.
ಮೊದಲು ಬ್ಯಾಟ್ ಮಾಡಿದ ಪಂಜಾಬ್, ಮಧ್ಯಮ ಕ್ರಮಾಂಕದಲ್ಲಿ ಆರ್ಭಟಿಸಿದ ಡೇವಿಡ್ ಮಿಲ್ಲರ್ (66) ಅರ್ಧ ಶತಕದ ನೆರವಿನೊಂದಿಗೆ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 198 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತ್ತು.
ನಂತರ 199 ರನ್‌ಗಳ ಕಠಿಣ ಸವಾಲನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದ ಭರವಸೆಯ ಬ್ಯಾಟ್ಸ್‌ಮನ್‌ಗಳು ಲಗುಬಗನೆ ಪೆವಿಲಿಯನ್‌ಗೆ ಹೆಜ್ಜೆ ಹಾಕುವ ಮೂಲಕ ಪರಾಭವ ಹೊಂದಿತು.
ಅರ್ಧ ಶತಕ ಸಿಡಿಸಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಎ.ಬಿ ಡಿವಿಲಿಯರ್ಸ್ (53) ಮಾತ್ರ ಬೆಂಗಳೂರು ಪರ ಮಿಂಚಿದರು. ನಂತರ ಕೆಳ ಕ್ರಮಾಂಕದಲ್ಲಿ ಮಿಚೆಲ್ ಸ್ಟಾರ್ಕ್ (29) ಮಾತ್ರ ಕೊಂಚ ಕ್ರೀಸ್‌ಗೆ ಕಚ್ಚಿ ನಿಂತುಕೊಂಡಿದ್ದರು.ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಪಂಜಾಬ್‌ನ ಸಂದೀಪ್ ಶರ್ಮಾ 3 ವಿಕೆಟ್ ಕಬಳಿಸಿದರೆ, ಶಿವಂ ಶರ್ಮಾ 2 ವಿಕೆಟ್ ಹಾಗೂ ಮಿಚೆಲ್ ಜಾನ್ಸನ್, ಲಕ್ಷ್ಮೀಪತಿ ಬಾಲಾಜಿ ಹಾಗೂ ಅಕ್ಷರ ಪಟೇಲ್ ತಲಾ 1 ವಿಕೆಟ್ ಪಡೆದರು.ಇದಕ್ಕೂ ಮುನ್ನ, ಡೇವಿಡ್ ಮಿಲ್ಲರ್ ಅಲ್ಲದೆ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಎಸೆತಗಳನ್ನು ವ್ಯಯ ಮಾಡದೇ ಪಂಜಾಬ್ ದೊಡ್ಡ ಮೊತ್ತ ಕಲೆ ಹಾಕಲು ನೆರವಾಗಿದ್ದರು. ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ (30), ಮಂದೀಪ್ ಸಿಂಗ್ (21), ಗ್ಲೆನ್ ಮ್ಯಾಕ್ಸ್‌ವೆಲ್ (25) ಬೇಗನೆ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರೂ, ಕ್ರೀಸ್‌ನಲ್ಲಿ ಇದ್ದಷ್ಟು ಸಮಯ ಆರ್‌ಸಿಬಿ ಬೌಲರ್‌ಗಳನ್ನು ಸರಿಯಾಗಿಯೇ ದಂಡಿಸಿದ್ದರು.
ಆರ್‌ಸಿಬಿ ಪರ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ಮಿಚೆಲ್ ಸ್ಟಾರ್ಕ್ ಹಾಗೂ ಹರ್ಷಲ್ ಪಟೇಲ್ ತಲಾ 2 ವಿಕೆಟ್ ಕಬಳಿಸಿದರೆ, ಅಲ್ಬಿ ಮಾರ್ಕೆಲ್, ವರುಣ್ ಅರುಣ್ ತಲಾ 1 ವಿಕೆಟ್ ಪಡೆದರು.
ಕರುಣಿಸಿದ ವರುಣ
ಗುರುವಾರ ಪೂರ್ತಿ ಉದ್ಯಾನ ನಗರಿಯಲ್ಲಿ ಮಳೆ ಕಾಟವಿದ್ದುದರಿಂದ, ಶುಕ್ರವಾರವೂ ವರುಣನ ಅಬ್ಬರ ಮುಂದುವರಿಯಲಿದೆ ಎಂದು ಕ್ರಿಕೆಟ್ ಅಭಿಮಾನಿಗಳು ನಂಬಿದ್ದರು. ಆದರೆ, ಶುಕ್ರವಾರ ಮಧ್ಯಾಹ್ನ ಸೂರ್ಯ ಪಂದ್ಯ ಸುಗಮವಾಗಿ ನಡೆಯಲು ಅನುವು ಮಾಡಿಕೊಟ್ಟ.
ಪದಾರ್ಪಣೆ ಪಂದ್ಯದಲ್ಲಿ ಮಿಂಚಿದ ಶಿವಂ ಶರ್ಮಾ
ನದೆಹಲಿಯ 20 ವರ್ಷದ ಸ್ಪಿನ್ ಬೌಲರ್ ಶಿವಂ ಅವರು ಕಿಂಗ್ಸ್ ಇಲೆವೆನ್ ಪರ ಪದಾರ್ಪಣೆ ಮಾಡಿದರು. ಕಳೆದ ಐಪಿಎಲ್ ಹರಾಜಿನಲ್ಲಿ ಈ ಸ್ಪಿನ್ ಬೌಲರ್ ರೂ. 10 ಲಕ್ಷಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಮಾರಾಟವಾಗಿದ್ದರು. ದೆಹಲಿಯ 19 ವರ್ಷದೊಳಗಿನ ತಂಡದೊಂದಿಗೆ ಆಡಿರುವ ಶಿವಂ ಅವರನ್ನು ಆ ಪ್ರದರ್ಶನದ ಆಧಾರದ ಮೇಲೆ ಪಂಜಾಬ್ ಕೋಚ್ ಸಂಜಯ್ ಬಂಗಾರ್ ತಮ್ಮ ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಪದಾರ್ಪಣೆ ಪಂದ್ಯದಲ್ಲಿ 2 ವಿಕೆಟ್ ಪಡೆದ ಶಿವಂ ಅದ್ಭುತಬೌಲಿಂಗ್ ಪ್ರದರ್ಶಿಸಿದರು. ಅವರು ಯುವರಾಜ್ ಸಿಂಗ್ ಮತ್ತು ಅಲ್ಬೀ ಮಾರ್ಕೆಲ್ ವಿಕೆಟ್ ಪಡೆದರು.
ಹೆಚ್ಚಿದ ಅಭಿಮಾನಿಗಳ ಅಬ್ಬರ
ಚಿನ್ನಸ್ವಾಮಿ ಅಂಗಣದಲ್ಲಿ ಮೇ 4ರಂದು ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಆರ್‌ಸಿಬಿ ನಡುವೆ ನಡೆದ ಪಂದ್ಯಕ್ಕಿಂತ, ಶುಕ್ರವಾರ ಆರ್‌ಸಿಬಿ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯಕ್ಕೆ ಹೆಚ್ಚಿನ ಅಭಮಾನಿಗಳು ಆಗಮಿಸಿದ್ದರು. ಹೈದಾರಾಬಾದ್ ವಿರುದ್ಧದ ಪಂದ್ಯದಲ್ಲಿ ಕಾರ್ಪೊರೇಟ್ ಮತ್ತು ಬೆಮೆಲ್ ಗ್ಯಾಲರಿಗಳು ಕಿಕ್ಕಿರಿದು ತುಂಬಿದ್ದವು. ಪಂಜಾಬ್ ತಂಡದ ಪರ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಸ್ಫೋಟಕ ಬ್ಯಾಟಿಂಗ್ ನೋಡಲೆಂದೇ ಇಷ್ಟೊಂದು ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಆದರೆ, ಬೇಗನೆ ಕ್ರೀಸ್‌ನಿಂದ ಪೆವಿಲಿಯನ್‌ನತ್ತ ಸಾಗಿದ ಮ್ಯಾಕ್ಸ್‌ವೆಲ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರುಗಳಲ್ಲಿ 8 ವಿಕೆಟ್‌ಗೆ 198
ವೀರೇಂದ್ರ ಸೆಹ್ವಾಗ್ ಸಿ ಕೊಹ್ಲಿ ಬಿ ಚಾಹಲ್ 30 (24), ಮಂದೀಪ್ ಸಿಂಗ್ ಸಿ ಮಾರ್ಕೆಲ್ ಬಿ ಹರ್ಷಲ್ ಪಟೇಲ್ 21 (15), ಗ್ಲೆನ್ ಮ್ಯಾಕ್ಸ್‌ವೆಲ್ ಸಿ ಸ್ಟಾರ್ಕ್ ಬಿ ಚಾಹಲ್ 25 (11), ಡೇವಿಡ್ ಮಿಲ್ಲರ್ ಸಿ ಚಾಹಲ್ ಬಿ ಆರುಣ್ 66 (29), ವೃದ್ಧಿಮಾನ್ ಸಹಾ ಸಿ ವಿಲಿಯರ್ಸ್ ಬಿ ಹರ್ಷಲ್ ಪಟೇಲ್ 17 (17), ಮಿಚೆಲ್ ಜಾನ್ಸನ್ ಅಜೇಯ 16 (12) , ಅಕ್ಷರ ಪಟೇಲ್ ಮಿಚೆಲ್ ಸ್ಟಾರ್ಕ್ 2 (3), ಶಿವಂ ಶರ್ಮಾ ಬಿ ಸ್ಟಾರ್ಕ್ 4 (2), ಲಕ್ಷ್ಮೀಪತಿ ಬಾಲಾಜಿ ಅಜೇಯ 1 (1)
ಇತರೆ: (ಲೆಗ್ ಬೈ-2, ವೈಡ್-11, ನೋಬಾಲ್-2 ) 15.
ವಿಕೆಟ್ ಪತನ: 1-60, 2-68, 3-93, 4-116, 5-170, 6-184, 7-189, 8-193.
ಬೌಲಿಂಗ್ ವಿವರ: ಮಿಚೆಲ್ ಸ್ಟಾರ್ಕ್ 4-0-43-2, ಅಲ್ಬಿ ಮಾರ್ಕೆಲ್ 4-0-20-1 , ವರುಣ್ ಆರುಣ್ 4-0-35-1, ಹರ್ಷಲ್ ಪಟೇಲ್ 3-0-56-2, ಯಜುವೇಂದ್ರ ಚಾಹಲ್ 4-0-23-2, ಯುವರಾಜ್ ಸಿಂಗ್ 1-0-19-0
ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 166
ಕ್ರಿಸ್ ಗೇಯ್ಲ್ ಸಿ ಸಾಹಾ ಬಿ ಸಂದೀಪ್ 4 (7), ಪಾರ್ಥೀವ್ ಪಟೇಲ್ ಸಿ ಮಂದೀಪ್ ಬಿ ಸಂದೀಪ್ 13 (14), ವಿರಾಟ್ ಕೊಹ್ಲಿ ಸಿ ಸಾಹಾ ಬಿ ಸಂದೀಪ್ 0 (1), ಸಚಿನ್ ರಾಣಾ ಬಿ ಪಟೇಲ್ 18 (16), ಡಿ ವಿಲಿಯರ್ಸ್ ಸಿ ಪಟೇಲ್ ಬಿ ಬಾಲಾಜಿ 53 (26), ಯುವರಾಜ್ ಸಿಂಗ್ ಸಿ ಸೆಹ್ವಾಗ್ ಬಿ ಶಿವಂ 3 (11), ಅಲ್ಬೀ ಮಾರ್ಕೆಲ್ ಸಿ ಬೇಯ್ಲಿ ಬಿ ಶಿವಂ 16 (8), ಮಿಚೆಲ್ ಸ್ಟಾರ್ಕ್ ಸಿ ಮಿಲ್ಲರ್ ಬಿ ಬಾಲಾಜಿ 29 (23), ಹರ್ಷಲ್ ಪಟೇಲ್ ಸಿ ಸಾಹಾ ಬಿ ಜಾನ್ಸನ್ 6 (3), ವರುಣ್ ಆರೋನ್ ಅಜೇಯ 17 (11), ಯಜುವೇಂದ್ರ ಚಹಾಲ್ ಅಜೇಯ 1 (1)
ಇತರೆ (ಲೆಗ್‌ಬೈಸ್-1, ವೈಡ್-4, ನೋಬಾಲ್-1) 6
ವಿಕೆಟ್ ಪತನ: 1-8, 2-8, 3-26, 4-39, 5-50, 6-76, 7-125, 8-133, 9-153.
ಬೌಲಿಂಗ್ ವಿವರ:
ಸಂದೀಪ್ ಶರ್ಮಾ 4-0-25-3, ಮಿಚೆಲ್ ಜಾನ್ಸನ್ 4-0-25-1, ಲಕ್ಷ್ಮೀಪತಿ ಬಾಲಾಜಿ 3-0-43-2, ಅಕ್ಷರ್ ಪಟೇಲ್ 4-0-22-1
ಶಿವಂ ಶರ್ಮಾ 4-0-26-2, ಮ್ಯಾಕ್ಸ್‌ವೆಲ್ 1-0-24-0