10ಕೆ ಮ್ಯಾರಥಾನ್ಗೆ ಅಗ್ರ ಅಥ್ಲೀಟ್ಗಳು
ಬೆಂಗಳೂರು: ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್ 2014ರಲ್ಲಿ ಭಾರತದ ಅಗ್ರ ಅಥ್ಲೀಟ್ಗಳು ಭಾಗವಹಿಸುತ್ತಿದ್ದಾರೆ.
ದೇಶದ ಪ್ರತಿಭಾನ್ವಿತ ಪುರುಷ ಮತ್ತು ಮಹಿಳೆಯರು ಸ್ಪರ್ಧೆಯತ್ತ ಮುಖ ಮಾಡಿದ್ದು, 60 ಪ್ರಮುಖ ಅಥ್ಲೀಟ್ಗಳು ಮೇ 18ರಂದು ನಡೆಯುವ ಮ್ಯಾರಥಾನ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಬಿ.ಸಿ ಟಿಳಕ್, ವಿ.ಎಲ್ ಡಂಗಿ, ಸೋಜಿ ಮ್ಯಾಥ್ಯೂ ಹಾಗೂ ಸಂತೋಷ್ ಕೆ ಪುರುಷರ ವಿಭಾಗದ ಪ್ರಮುಖ ಅಥ್ಲೀಟ್ಗಳಾದರೆ, ವಿಜಯಮಾಲಾ ಪಾಟೀಲ್, ಪ್ರಿಯಾಂಕ ಸಿಂಗ್ ಪಟೇಲ್, ನೀಲಮ್ ರಜ್ಪೂತ್ ಹಾಗೂ ಮನಿಶಾ ದತ್ತಾತ್ರಯ ಸುಲೇಖೆ ಅವರು ಮಹಿಳೆಯರ ವಿಭಾಗದಲ್ಲಿ ಭಾಗವಹಿಸಿದ್ದಾರೆ.
ಭಾರತದ ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ಅಗ್ರ ಸ್ಥಾನ ಪಡೆಯುವ ಅಥ್ಲೀಟ್ ರು. 2,00,000 ಲಕ್ಷ ಬಹುಮಾನ ಪಡೆದರೆ, ರನ್ನರ್ ಅಪ್ ಪಡೆಯುವ ಅಥ್ಲೀಟ್ಗಳು 1,50,000 ಲಕ್ಷ ಬಹುಮಾನ ಗಿಟ್ಟಿಸಲಿದ್ದಾರೆ.