ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕಿಂಗ್ಸ್ ವಶಕ್ಕೆ ಮುಂಬೈ

ಚೆನ್ನೈ ಸೂಪರ್ ಕಿಂಗ್ಸ್ ತಂಡ ಶನಿವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್‌ಗಳ ಗೆಲವು ದಾಖಲಿಸಿದೆ.

Srinivasa Murthy VN
Updated On : 11 May 2014, 1:04 am

ಮುಂಬೈ: ಮತ್ತೊಮ್ಮೆ ಡ್ವೈನ್ ಸ್ಮಿತ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ 7ನೇ ಆವೃತ್ತಿಯ ಶನಿವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್‌ಗಳ ಗೆಲವು  ದಾಖಲಿಸಿದೆ.  ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 157 ರನ್ ಕಲೆ ಹಾಕುವಲ್ಲಿ ಯಶಸ್ವಿಯಾಯಿತು. ಈ ಮೊತ್ತವನ್ನು ಬೆನ್ನಟ್ಟಿದ ಸಿಎಸ್‌ಕೆ 19.3 ಓವರ್‌ಗಳಲ್ಲಿ 6 ವಿಕೆಟ್‌ಗೆ 160 ರನ್ ಕಲೆ ಹಾಕಿತು.
ಆಂರಭಿಕ ಆಘಾತ: ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ತಂಡದ ಪರ ಆರಂಭಿಕರಾಗಿ ಆಗಮಿಸಿದ ಸಿ.ಎಂ ಗೌತಮ್ (9) ಆರಂಭದಲ್ಲೇ ವಿಕೆಟ್ ಒಪ್ಪಿಸುವ ಮೂಲಕ ತಂಡದಲ್ಲಿ ನಿರಾಸೆ ಮೂಡಿಸಿದರು. ನಂತರ ಎರಡನೇ ವಿಕೆಟ್‌ಗೆ ಜತೆಯಾದ ಲೆಂಡ್ಲ್ ಸಿಮನ್ಸ್ (38) ಹಾಗೂ ಅಂಬಟಿ ರಾಯುಡು ತಂಡಕ್ಕೆ 61 ರನ್‌ಗಳ ಜತೆಯಾಟ ನೀಡುವ ಮೂಲಕ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು. ಈ ವೇಳೆ ಸಿಮನ್ಸ್ ವಿಕೆಟ್ ಕೈಚೆಲ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದರು.
ಇನ್ನು ಮುಂಬೈ ತಂಡದ ಪರ ಉತ್ತಮ ರೀತಿಯಲ್ಲಿ ಇನಿಂಗ್ಸ್ ಕಟ್ಟಿದ ಅಂಬಟಿ ರಾಯುಡು 43 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 59 ರನ್ ಕಲೆ ಹಾಕಿದರು. ರಾಯುಡು ಜತೆಗೆ 45 ರನ್‌ಗಳ ಉತ್ತಮ ಜತೆಯಾಟ ನೀಡಿದ ರೋಹಿತ್ ಶರ್ಮಾ (19) ಇನಿಂಗ್ಸ್ ಅಂತ್ಯದವರೆಗೂ ಕ್ರೀಸ್‌ನಲ್ಲಿ ನಿಲ್ಲುವಲ್ಲಿ ವಿಫಲರಾದರು.
ನಂತರ ಬಂದ ಪೊಲಾರ್ಡ್ (0) ಖಾತೆ ತೆರೆಯುವ ಮುನ್ನ ಔಟಾದರು. ಅಂತಿಮವಾಗಿ ಅಬ್ಬರದ ಬ್ಯಾಟಿಂಗ್ ನಡೆಸಿದ ಆ್ಯಂಡರ್ಸನ್ (ಅಜೇಯ 18), ಆದಿತ್ಯ ತಾರೆ (9) ತಂಡದ ಮೊತ್ತವನ್ನು 150ರ ಗಡಿ ದಾಟುವಂತೆ ನೋಡಿಕೊಂಡರು.
ಸ್ಮಿತ್ ಆಸರೆ: ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಸರೆಯಾಗಿದ್ದು, ಆರಂಭಿಕ ಡ್ವೈನ್ ಸ್ಮಿತ್ (57 ರನ್, 51 ಎಸೆತ, 5 ಬೌಂಡರಿ, 3 ಸಿಕ್ಸರ್). ಸ್ಮಿತ್ ಜತೆಗೆ ಆರಂಭಿಕರಾಗಿ ಕಣಕ್ಕಿಳಿದ ಮೆಕಲಂ (13), ನಂತರ ಬಂದ ಸುರೇಶ್ ರೈನಾ (19), ಡುಪ್ಲೆಸಿಸ್ (31) ರನ್ ಗಳಿಸಿ ಔಟಾದರು. ಆದರೆ ಜವಾಬ್ದಾರಿಯುತವಾಗಿ ತಂಡಕ್ಕೆ ಆರಂಭಿಕ ಹಂತದಲ್ಲಿ ಇನಿಂಗ್ಸ್ ಕಟ್ಟಿದ ಸ್ಮಿತ್, ತಂಡ ಪಂದ್ಯದ ಮೇಲೆ ನಿಯಂತ್ರಣ ಸಾಧಿಸುವಂತೆ ಮಾಡಿದರು. ಅಂತಿಮವಾಗಿ ಕ್ಷಣದಲ್ಲಿ ಜಡೇಜಾ (6), ಮಿಥುನ್ ಮನ್‌ಹಾಸ್ (0), ವಿಕೆಟ್ ಕಳೆದುಕೊಂಡರೂ, ಅಜೆಯರಾಗುಳಿದ ನಾಯಕ ಮಹೇಂದ್ರ ಸಿಂಗ್ ಧೋನಿ (22) ತಂಡವನ್ನು ಗೆಲವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 157
ಲೆಂಡ್ಲ್ ಸಿಮನ್ಸ್ ಸಿ ಡುಪ್ಲೆಸಿಸ್ ಬಿ ಅಶ್ವಿನ್ 38, ಸಿ.ಎಂ ಗೌತಮ್ ಸಿ ಮೆಕಲಂ ಬಿ ಬದ್ರಿ 9, ಅಂಬಟಿ ರಾಯುಡು ಸಿ ಜಡೇಜಾ ಬಿ ಮೊಹಿತ್ 59, ರೋಹಿತ್ ಶರ್ಮಾ ಸಿ ರೈನಾ ಬಿ ಅಶ್ವಿನ್ 19, ಕೀರನ್ ಪೊಲಾರ್ಡ್ ಸಿ ರೈನಾ ಬಿ ಅಶ್ವಿನ್ 0, ಕೊರೆ ಆ್ಯಂಡರ್ಸನ್ ಅಜೇಯ 18, ಆದಿತ್ಯ ತಾರೆ ಸಿ ಡುಪ್ಲೆಸಿಸ್ ಬಿ ಈಶ್ವರ್ 9
ಇತರೆ: (ವೈಡ್ 5) ಒಟ್ಟು 5
ವಿಕೆಟ್ ಪತನ: 1-16, 2-77, 3-122, 4-129, 5-129, 6-157
ಬೌಲಿಂಗ್ ವಿವರ: ಸ್ಯಾಮ್ಯುಯೆಲ್ ಬದ್ರಿ 4-0-34-1, ಈಶ್ವರ್ ಪಾಂಡೆ 4-0-34-1, ರವೀಂದ್ರ ಜಡೇಜಾ 4-0-33-0, ಮೋಹಿತ್ ಶರ್ಮಾ 4-0-26-1, ಆರ್ ಅಶ್ವಿನ್ 4-0-30-3
ಚೆನ್ನೈ ಸೂಪರ್ ಕಿಂಗ್ಸ್ 19.3 ಓವರ್‌ಗಳಲ್ಲಿ 6 ವಿಕೆಟ್‌ಗೆ 160
ಡ್ವೈನ್ ಸ್ಮಿತ್ ಸಿ ಸಿಮನ್ಸ್ ಬಿ ಪ್ರವೀಣ್ 57, ಬ್ರೆಂಡನ್ ಮೆಕಲಂ ಎಲ್‌ಬಿ ಪ್ರವೀಣ್ 13, ಸುರೇಶ್ ರೈನಾ ಸ್ಟಂಪ್ ಗೌತಮ್ ಬಿ ಪೊಲಾರ್ಡ್ 19, ಡುಪ್ಲೆಸಿಸ್ ಬಿ ಮಾಲಿಂಗ 31, ಧೋನಿ ಅಜೇಯ 22, ರವೀಂದ್ರ ಜಡೇಜಾ ಬಿ ಮಾಲಿಂಗ 6, ಮಿಥುನ್ ಮನ್‌ಹಾಸ್ ರನೌಟ್ (ಪ್ರವೀಣ್/ಗೌತಮ್) 0, ಆರ್ ಅಶ್ವಿನ್ ಅಜೇಯ 0
ಇತರೆ: (ಬೈ 1, ಲೆಗ್ ಬೈ 5, ವೈಡ್ 5,) ಒಟ್ಟು 11
ವಿಕೆಟ್ ಪತನ: 1-29, 2-56, 3-119, 4-129, 5-146, 6-147
ಬೌಲಿಂಗ್ ವಿವರ: ಪ್ರವೀಣ್ ಕುಮಾರ್ 4-0-31-2
ಲಸಿತ್ ಮಾಲಿಂಗ 4-0-15-2, ಜಸ್ಪ್ರಿತ್ ಬುರ್ಮ್ರಾ 4-0-33-0, ಹರ್ಭಜನ್ ಸಿಂಗ್ 4-0-22-0, ಕೀರನ್ ಪೊಲಾರ್ಡ್ 2.3-0-42-1, ಕೊರೆ ಆ್ಯಂಡರ್ಸನ್ 1-0-11-0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement