ಸನ್ ನೆರವಿಗೆ ವರುಣ
ನವದೆಹಲಿ: ವರುಣನ ಕಣ್ಣಾಮುಚ್ಚಾಲೆ ಆಟದ ನಡುವೆಯೂ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದ ಸನ್ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ 8 ವಿಕೆಟ್ ಅಂತರದಿಂದ ಗೆಲವು ದಾಖಲಿಸಿದೆ.
ಟಾಸ್ ಗೆದ್ದ ಸನ್ರೈಸರ್ಸ್ ಹೈದರಾಬಾದ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಹಾಗಾಗಿ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಡೆಲ್ಲಿ ಡೇರ್ಡೆವಿಲ್ಸ್ ತಂಡ 20 ಓವರ್ಗಳಲ್ಲಿ 7 ವಿಕೆಟ್ಗೆ 143 ರನ್ ದಾಖಲಿಸಿತು. ನಂತರ ಮಳೆ ಅಡ್ಡಿ ಪಡಿಸಿದ ಹಿನಲೆಯಲ್ಲಿ ಡಕ್ವರ್ತ್ ಲೂಯಿಸ್ ನಿಯಮದನ್ವಯ ಸನ್ರೈಸರ್ಸ್ಗೆ 5 ಓವರ್ಗಳಲ್ಲಿ 43 ರನ್ ಗುರಿ ನೀಡಲಾಯಿತು. ಈ ಮೊತ್ತವನು ಬೆನಟ್ಟಿದ ಸನ್ರೈಸರ್ಸ್ ಹೈದರಾಬಾದ್ 4.2 ಓವರ್ಗಳಲ್ಲಿ 2 ವಿಕೆಟ್ಗೆ 44 ರನ್ ಕಲೆ ಹಾಕಿತ್ತು.
ಆರಂಭಿಕ ಕುಸಿತ: ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೇರ್ಡೆವಿಲ್ಸ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಹಿನಡೆ ಅನುಭವಿಸಿತು. ಆರಂಭಿಕರಾಗಿ ಕಣಕ್ಕಿಳಿದ ಕಾಕ್ (7) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ನಂತರ ಜತೆಯಾದ ಕೆವಿನ್ ಪೀಟರ್ಸನ್ ಹಾಗೂ ಮಾಯಾಂಕ್ ಅಗರ್ವಾಲ್ ತಂಡಕ್ಕೆ 44 ರನ್ ಗಳ ಜತೆಯಾಟ ನೀಡಿದರು. ನಂತರ ಬಂದ ದಿನೇಶ್ ಕಾರ್ತಿಕ್ ಹಾಗೂ ಲಕ್ಷ್ಮಿ ರತನ್ ಶುಕ್ಲಾ ಸಹ ಉತ್ತಮ ಆರಂಭ ಪಡೆದರಾದರೂ ಅದನು ದೊಡ್ಡ ಇನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು.
ನಂತರ ಬಂದ ಬ್ಯಾಟ್ಸ್ಮನ್ಗಳು ಒಂದಕ್ಕಿ ಸಂಪಾದನೆಗೆ ಪೆವಿಲಿಯನ್ ಸೇರಿಕೊಂಡ ಪರಿಣಾಮ ಡೇರ್ಡೆವಿಲ್ಸ್ ತಂಡ 143 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ವೇಳೆ 2 ವಿಕೆಟ್ ಕಬಳಿಸಿದ ಅಮಿತ್ ಮಿಶ್ರಾ ಐಪಿಎಲ್ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದರು.
ಡೇರ್ಡೆವಿಲ್ಸ್ ಇನಿಂಗ್ಸ್ ಮುಕ್ತಾಯಗೊಂಡು ಸನ್ರೈಸರ್ಸ್ ತಂಡದ ಇನಿಂಗ್ಸ್ ಆರಂಭವಾಗುವಾಗ ಮತ್ತೆ ಮಳೆಸುರಿದ ಪರಿಣಾಮ ಹೈದರಾಬಾದ್ ಇನಿಂಗ್ಸ್ ಅನು 15 ಓವರ್ಗಳಿಗೆ ಸೀಮಿತಗೊಳಿಸಲಾಯಿತು. ಅಲ್ಲದೆ ರೈಸರ್ಸ್ಗೆ 117 ರನ್ ಗುರಿ ನೀಡಲಾಯಿತು.
ಈ ಮೊತ್ತವನು ಬೆನಟ್ಟಲು ಬಂದ ಹೈದರಾಬಾದ್ ತಂಡ ಒಂದು ಓವರ್ ಆದ ನಂತರ ಮತ್ತೆ ಮಳೆ ಸುರಿಯಲಾರಂಭಿಸಿತು ಹಾಗಾಗಿ ಐದು ನಿಮಿಷಗಳ ಕಾಲ ಪಂದ್ಯವನು ನಿಲ್ಲಿಸಲಾಯಿತು. ನಂತರ ಮತ್ತೆ ಪಂದ್ಯ ಆರಂಭವಾಯಿತಾದರೂ ಹೈದರಾಬಾದ್ ತಂಡ 2 ಓವರ್ಗಳಲ್ಲಿ 1 ವಿಕೆಟ್ಗೆ 17 ರನ್ ಗಳಿಸಿದ್ದಾಗ ಮತ್ತೆ ಮಳೆ ಸುರಿಯಲಾರಂಭಿಸಿತು.
ನಂತರ ಸನ್ರೈಸರ್ಸ್ಗೆ 5 ಓವರ್ಗಳಲ್ಲಿ 43 ರನ್ ಗುರಿ ನೀಡಲಾಯಿತು. ಈ ಮೊತ್ತವನು ಬೆನಟ್ಟಿದ ಹೈದರಾಬಾದ್ ತಂಡ ಧವನ್ ಹಾಗೂ ಫಿಂಚ್ ವಿಕೆಟ್ ಕಳೆದುಕೊಂಡಿತಾದರೂ, ವಾರ್ನರ್ ಹಾಗೂ ನಮನ್ ಓಜಾ ಅಜೇಯ ಬ್ಯಾಟಿಂಗ್ನಿಂದ ಗೆಲವಿನ ದಡ ಸೇರಿತು.
ಸ್ಕೋರ್ ವಿವರ
ಡೆಲ್ಲಿ ಡೇರ್ಡೆವಿಲ್ಸ್ 20 ಓವರ್ಗಳಲ್ಲಿ 7 ವಿಕೆಟ್ಗೆ 143
ಖಿಂಟಾನ್ ಡಿ ಕಾಕ್ ಸಿ ರಾಹುಲ್ ಬಿ ಸ್ಟೇಯ್ 7, ಕೆವಿನ್ ಪೀಟರ್ಸನ್ ಸಿ ಧವನ್ ಬಿ ಮಿಶ್ರಾ 35, ಮಾಯಾಂಕ್ ಅಗರ್ವಾಲ್ ಸಿ ವಾರ್ನರ್ ಬಿ ಮಿಶ್ರಾ 25, ದಿನೇಶ್ ಕಾರ್ತಿಕ್ ಸಿ ಸ್ಟೇಯ್ ಬಿ ಹೆನ್ರಿಕ್ಸ್39, ಲಕ್ಷ್ಮಿ ಶುಕ್ಲಾ ಸಿ ವಾರ್ನರ್ ಬಿ ಹೆನ್ರಿಕ್ಸ್ 21, ಡುಮಿನಿ ಬಿ ಭುವನೇಶ್ವರ್ 4, ಕೇದಾರ್ ಜಾಧವ್ ಸಿ ಪಠಾಣ್ ಬಿ ಸ್ಟೇಯ್ 5, ರಾಹುಲ್ ಶುಕ್ಲಾ ಅಜೇಯ 2
ಇತರೆ: (ಎಲ್ಬಿ 4, ವೈಡ್ 1) ಒಟ್ಟು 5
ವಿಕೆಟ್ ಪತನ: 1-10, 2-54, 3-73, 4-128, 5-132, 6-139, 7-143
ಬೌಲಿಂಗ್ ವಿವರ: ಡೇಲ್ ಸ್ಟೇಯ್ 4-0-20-2, ಭುವನೇಶ್ವರ್ 4-0-23-1, ಕರಣ್ ಶರ್ಮಾ 3-0-29-0, ಮೊಯ್ಸಿಸ್ ಹೆನ್ರಿಕ್ಸ್ 3-0-26-2, ಅಮಿತ್ ಮಿಶ್ರಾ 3-0-23-2, ಇರ್ಫಾನ್ ಪಠಾಣ್ 3-0-18-0
ಸನ್ರೈಸರ್ಸ್ ಹೈದರಾಬಾದ್ 4.2 ಓವರ್ಗಳಲ್ಲಿ 2 ವಿಕೆಟ್ಗೆ 44
ಎರಾನ್ ಫಿಂಚ್ ಬಿ ಲಕ್ಷ್ಮಿ ಶುಕ್ಲಾ 4, ಶಿಖರ್ ಧವನ್ ಸಿ ಡುಮಿನಿ ಬಿ ಕೌಲ್ 4, ಡೇವಿಡ್ ವಾರ್ನರ್ ಅಜೇಯ 12, ನಮನ್ ಓಜಾ ಅಜೇಯ 13
ಇತರೆ: (ಬೈ 4, ಲೆಗ್ ಬೈ 2, ವೈಡ್ 4, ನೊಬಾಲ್ 1) ಒಟ್ಟು 11
ವಿಕೆಟ್ ಪತನ: 1-13, 2-25
ಬೌಲಿಂಗ್ ವಿವರ: ಮೊಹಮದ್ ಶಮಿ 1-0-6-0, ಸಿದ್ಧಾರ್ಥ್ ಕೌಲ್ 1-0-5-1, ಇಮ್ರಾನ್ ತಾಹಿರ್ 1-0-7-0, ಲಕ್ಷ್ಮಿ ಶುಕ್ಲಾ 1-0-13-1, ರಾಹುಲ್ ಶುಕ್ಲಾ 0.2-0-7-0
ಅಂಕಪಟ್ಟಿ
ತಂಡ ಪಂದ್ಯ ಜಯ ಸೋಲು ಅಂಕ ಸರಾಸರಿ
ಕಿಂಗ್ಸ್ ಇಲೆವೆನ್ ಪಂಜಾಬ್ 8 7 1 14 1.264
ಚೆನೈ ಸೂಪರ್ ಕಿಂಗ್ಸ್ 9 7 2 14 0.608
ರಾಜಸ್ಥಾನ ರಾಯಲ್ಸ್ 8 5 3 10 0.204
ಸನ್ರೈಸರ್ಸ್ ಹೈದರಾಬಾದ್ 8 4 4 8 -0.200
ಕೋಲ್ಕತಾ ನೈಟ್ ರೈಡರ್ಸ್ 8 3 5 6 -0.097
ರಾಯಲ್ ಚಾಲೆಂಜರ್ಸ್ ಬೆಂಗಳೂರು 8 3 5 6 -0.444
ಮುಂಬೈ ಇಂಡಿಯನ್ಸ್ 8 2 6 4 -0.471
ಡೆಲ್ಲಿ ಡೇರ್ಡೆವಿಲ್ಸ್ 9 2 7 4 -0.953