ಆರ್‌ಸಿಬಿಗೆ ಗೆದ್ದರಷ್ಟೇ ಉಳಿವು
ಹೈದರಾಬಾದ್: ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅದ್ಭುತ ಗೆಲವು ದಾಖಲಿಸುವ ಮೂಲಕ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಸುತ್ತು ಪ್ರವೇಶಿಸುವ ಆಸೆ ಜೀವಂತವಿರಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಮತ್ತೊಂದು ಜಯದ ಅನಿವಾರ್ಯತೆಯಲ್ಲಿದೆ.
ಉಪ್ಪಳದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.
ಆರ್‌ಸಿಬಿ ತಂಡ ಪ್ರಸ್ತುತ ತೀರ ಒತ್ತಡದಲ್ಲಿದೆ. ಮುಂದಿನ ಹಂತಕ್ಕೆ ತೇರ್ಗಡೆ ಹೊಂದುವ ಸಾಧ್ಯತೆಯನ್ನು ಉಳಿಸಿಕೊಳ್ಳಬೇಕಾದರೆ, ಉಳಿದ ತನ್ನ ಎಲ್ಲ ಮೂರೂ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಒಂದು ಪಂದ್ಯದಲ್ಲಿ ಸೋತರೂ ಸಹ ಪ್ಲೇಆಫ್ ಸುತ್ತಿನ ಹಾದಿ ಮುಚ್ಚಿಹೋಗುವ ಆತಂಕವಿದೆ.
ಕಳೆದ ಕದನದಲ್ಲಿ ಎರಡು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೋಚಕ ಗೆಲವು ಪಡೆದಿರುವ ಆರ್‌ಸಿಬಿ, ಹೈದರಾಬಾದ್ ತಂಡದ ವಿರುದ್ಧವೂ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಜ್ಜಾಗಿ ನಿಂತಿದೆ.
ಮತ್ತೊಂದೆಡೆ ಸನ್‌ರೈಸರ್ಸ್ ತಂಡ ಈಗಾಗಲೇ ಪ್ಲೇಆಫ್ ಸುತ್ತಿನ ಪೈಪೋಟಿಯಿಂದ ಹೊರಬಿದ್ದಿರುವ ಕಾರಣ ತನ್ನ ಗೌರವಕ್ಕಾಗಿ ಮಾತ್ರ ಪೈಪೋಟಿ ನಡೆಸಬೇಕಾಗಿದೆ.
ಅಂಕಪಟ್ಟಿ
ತಂಡ ಪಂದ್ಯ ಜಯ ಸೋಲು ಅಂಕ ಸರಾಸರಿ
ಕಿಂಗ್ಸ್ ಇಲೆವೆನ್ ಪಂಜಾಬ್ 10 8 2 16 1.015
ಚೆನ್ನೈ ಸೂಪರ್ ಕಿಂಗ್ಸ್ 11 8 3 16 0.487
ರಾಜಸ್ಥಾನ ರಾಯಲ್ಸ್ 12 7 5 14 0.334
ಕೋಲ್ಕತಾ ನೈಟ್ ರೈಡರ್ಸ್ 11 6 5 12 0.087
ರಾಯಲ್ ಚಾಲೆಂಜರ್ಸ್ ಬೆಂಗಳೂರು 11 5 6 10 -0.270
ಮುಂಬೈ ಇಂಡಿಯನ್ಸ್ 11 4 7 8 -0.220
ಸನ್‌ರೈಸರ್ಸ್ ಹೈದರಾಬಾದ್ 11 4 7 8 -0.325
ಡೆಲ್ಲಿ ಡೇರ್‌ಡೆವಿಲ್ಸ್ 11 2 9 4 -1.156