ಬೆಂಗಳೂರು ಕ್ಲಬ್ಗೆ ಬ್ಲಾಟರ್ ಅಭಿನಂದನೆ
ನವದೆಹಲಿ: ಪದಾರ್ಪಣೆ ಮಾಡಿದ ಋತುವಿನಲ್ಲೇ ಐ-ಲೀಗ್ ಚಾಂಪಿಯನ್ ಪಟ್ಟ ಅಲಂಕರಿಸಿದ ಬೆಂಗಳೂರು ಫುಟ್ಬಾಲ್ ಕ್ಲಬ್ಗೆ ಫೀಫಾ ಅಧ್ಯಕ್ಷ ಸೆಪ್ ಬ್ಲಾಟರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
'ತಂಡದ ಎಲ್ಲ ಆಟಗಾರರಿಗೆ, ಮ್ಯಾನೇಜರ್ಗೆ, ತಾಂತ್ರಿಕ ಸಿಂಬ್ಬಂದಿ ಮತ್ತು ವೈದ್ಯಕೀಯ ಸಿಬ್ಬಂದಿ ಸೇರಿದಂತೆ ತಂಡದ ಬೆಂಬಲಿಗರಿಗೂ ಅಭಿನಂದನೆ ತಿಳಿಸಿ. ಕ್ಲಬ್ನ ವಿಜಯದ ಹಿಂದೆ ಸಂಸ್ಥೆ ಸಹ ಮಹತ್ವದ ಪಾತ್ರ ವಹಿಸಿದೆ ಎನ್ನುವುದರಲ್ಲಿ ಅನುಮಾನವಿಲ್ಲ' ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ಗೆ ಬರೆದ ಪತ್ರದಲ್ಲಿ ಬ್ಲಾಟರ್ ತಿಳಿಸಿದ್ದಾರೆ.