ಥಾಯ್ಲೆಂಡ್ ಮಣಿಸಿದ ಭಾರತ ವನಿತೆಯರು
ಲಂಡನ್: ದಿಟ್ಟ ಪ್ರದರ್ಶನ ನೀಡಿದ ಸೈನಾ ನೆಹ್ವಾಲ್ , ವಿಶ್ವ ಚಾಂಪಿಯನ್ ರತಚನಾಕ್ ಇಂತನಾನ್ ಅವರನ್ನು ಸೋಲಿಸುವ ಮೂಲಕ ಉಬೇರ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಥಾಯ್ಲೆಂಡ್ ವಿರುದ್ಧ ಭಾರತವನಿತೆಯರ ತಂಡ 3-2 ಅಂತರದಿಂದ ಜಯ ಕಂಡುಕೊಂಡಿತು. ಸೈನಾ ಮತ್ತು ಸಿಂಧು ಅವರು ಮೊದಲ ಎರಡು ಸಿಂಗಲ್ಸ್ ಪಂದ್ಯಗಳಲ್ಲಿ ಜಯ ಕಂಡು ಕೊಂಡರು. ನಂತರಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಜೋಡಿ ಡಬಲ್ಸ್‌ನಲ್ಲಿ ಜಯ ಸಾಧಿಸುವ ಮೂಲಕ ಪಂದ್ಯದಲ್ಲಿ ಭಾರತ 3-2 ಅಂತರದಿಂದ ಜಯ ಕಂಡುಕೊಂಡಿತು.
ಆದರೆ, ಪಿ.ಸಿ ತುಳಸಿ ಸಿಂಗಲ್ಸ್‌ನಲ್ಲಿ, ಸೈನಾ ಮತ್ತು ಸಿಂಧು ಜೋಡಿ ಡಬಲ್ಸ್ ಪಂದ್ಯದಲ್ಲಿ ಸೋಲನುಭವಿಸಿದರು.