ನಿಧಾನಗತಿ ಬೌಲಿಂಗ್ ಕೆವಿನ್ಗೆ 12 ಲಕ್ಷ ದಂಡ
ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ತಮ್ಮ ತಂಡ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ ಕಾರಣಕ್ಕೆ ಡೆಲ್ಲಿ ಡೇರ್ಡೆವಿಲ್ಸ್ ನಾಯಕ ಕೆವಿನ್ ಪೀಟರ್ಸನ್ 12 ಲಕ್ಷ ರೂಪಾಯಿ ದಂಡ ನೀಡಬೇಕಾಗಿದೆ.
ಈ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ಕೆವಿನ್ ಪೀಟರ್ಸನ್ ಮೊದಲ ಬಾರಿಗೆ ಈ ತಪ್ಪೆಸಗಿದ್ದಾರೆ. ದೆಹಲಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ್ದರಿಂದ ಪೀಟರ್ಸನ್ಗೆ ಐಪಿಎಲ್ ನೀತಿ ಸಂಹಿತೆ ಅಡಿ ಈ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ತಿಳಿಸಿದೆ.
ಈಗಾಗಲೇ ಪ್ಲೇಆಫ್ ಸುತ್ತಿನಿಂದ ನಿರ್ಗಮಿಸಿರುವ ಡೆಲ್ಲಿ ಡೇರ್ಡೆವಿಲ್ಸ್ ಪಂಜಾಬ್ ಎದುರು ಸೋಲುವ ಮೂಲಕ ಸತತ ಏಳನೇ ಆಘಾತ ಅನುಭವಿಸಿತ್ತು.