ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪ್ಲೇ ಆಫ್ ಆಸೆ ಕ್ಷೀಣ

ಮತ್ತೊಂದು ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಗೆಲವು ದಾಖಲಿಸಲು ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ..

Srinivasa Murthy VN
Updated On : 21 May 2014, 2:10 am

ಹೈದರಾಬಾದ್: ಮತ್ತೊಂದು ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಗೆಲವು ದಾಖಲಿಸಲು ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಏಳನೇ ಆವೃತ್ತಿಯ ಪ್ಲೇ ಆಫ್ ಪ್ರವೇಶಿಸುವ ಅವಕಾಶವನ್ನು ಬಹುತೇಕ ಕೈಚೆಲ್ಲಿದೆ.
ಮಂಗಳವಾರ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್‌ಗಳ ಅಂತರದಲ್ಲಿ ಸೋಲನುಭವಿಸಿದೆ. ಹಾಗಾಗಿ ಪಂದ್ಯಾವಳಿಯಿಂದ ಬಹುತೇಕ ಹೊರ ಬಿದ್ದಂತಾಗಿದೆ.
ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆದುಕೊಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆದಿದ್ದು, ಮೂರನೇ ಹಾಗೂ ನಾಲ್ಕನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ.
ಈ ಎರಡು ಸ್ಥಾನಗಳಿಗೆ ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತಾ ನೈಟ್‌ರೈಡರ್ಸ್ ತಂಡಗಳೊಂದಿಗೆ ಆರ್‌ಸಿಬಿ ಪೈಪೋಟಿ ನಡೆಸುತ್ತಿತ್ತು. ಹಾಗಾಗಿ ಆರ್‌ಸಿಬಿ ತಂಡ ಈ ಪಂದ್ಯವೂ ಸೇರಿದಂತೆ ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಾಗ ಮಾತ್ರ ಪ್ಲೇ ಆಫ್‌ಗೆ ಸುಲಭ ಪ್ರವೇಶ ಪಡೆಯಬಹುದಾಗಿತ್ತು. ಆದರೆ ಸನ್‌ರೈಸರ್ಸ್ ವಿರುದ್ಧದ ಸೋಲು ಆರ್‌ಸಿಬಿ ತಂಡದ ಪ್ಲೇ ಆಫ್ ಆಸೆಯನ್ನು ಕ್ಷೀಣಿಸಿದಂತಾಗಿದೆ.
ಆರ್‌ಸಿಬಿ ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆಲವು ದಾಖಲಿಸಿದರೂ, ಸಹ ಆರ್‌ಸಿಬಿ, ಕೆಕೆಆರ್ ಹಾಗೂ ರಾಜಸ್ಥಾನ ರಾಯಲ್ಸ್ ಪಂದ್ಯಗಳ ಫಲಿತಾಂಶದ ಆಧಾರದ ಮೇಲೆ ತಮ್ಮ ಹಣೆಬರಹವನ್ನು ಪರೀಕ್ಷಿಸಿಕೊಳ್ಳಬೇಕಿದೆ.
ಆರ್‌ಸಿಬಿ ಪ್ಲೇ ಆಫ್ ಹಾದಿಯಲ್ಲಿ ಸಾಗಬೇಕಾದರೆ, ಮುಂದಿನ ಎರಡು ಪಂದ್ಯಗಳಲ್ಲಿ ಉತ್ತಮ ರನ್‌ರೇಟ್ ಗೆಲವು ದಾಖಲಿಸುವುದರ ಜತೆಗೆ ಕೆಕೆಆರ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ತಮ್ಮ ಪಂದ್ಯಗಳಲ್ಲಿ ಸೋಲನುಭವಿಸಬೇಕಿದೆ. ಈ ರೀತಿ ಆದರೆ ಮಾತ್ರ ಆರ್‌ಸಿಬಿ ಪ್ಲೇ ಆಫ್ ಪ್ರವೇಶ ಸಾಧ್ಯ. ಹಾಗಾಗಿ ಆರ್‌ಸಿಬಿ ಆಸೆ ಬಹುತೇಕ ಕ್ಷೀಣಿಸಿದಂತಾಗಿದೆ.
ಆರಂಭದಲ್ಲೇ ತಪ್ಪು ನಿರ್ಧಾರ: ಟಾಸ್ ಗೆದ್ದ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ದಿಂದ ಕೈ ಸುಟ್ಟುಕೊಂಡರು. ಆರಂಭದಲ್ಲಿ ಸನ್‌ರೈಸರ್ಸ್ ಬೌಲಿಂಗ್ ಮುಂದೆ ಬ್ಯಾಟ್ಸ್‌ಮನ್‌ಗಳು ಪರದಾಡಿದ ಪರಿಣಾಮ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 160 ರನ್ ದಾಖಲಿಸಿತು.
ಚೇಸಿಂಗ್‌ನಲ್ಲಿ ಉತ್ತಮ ದಾಖಲೆ ಹೊಂದಿರುವ ಆರ್‌ಸಿಬಿ ತಂಡ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದಿದ್ದು, ಮುಳುವಾಗಿ ಪರಿಣಮಿಸಿತು.
ಇನ್ನು ಆರಂಭದಲ್ಲಿ ಕ್ರಿಸ್ ಗೇಯ್ಲ್, ಪಾರ್ಥಿವ್ ಪಟೇಲ್ ಹಾಗೂ ಯುವರಾಜ್ ಸಿಂಗ್ ಮಂದಗತಿಯ ಬ್ಯಾಟಿಂಗ್ ನಡೆಸುವ ಮೂಲಕ, ಹೆಚ್ಚು ಎಸೆತಗಳನ್ನು ವ್ಯರ್ಥ ಮಾಡಿದರು. ಅಂತಿಮ ಓವರ್‌ಗಳಲ್ಲಿ ನಾಯಕ ಕೊಹ್ಲಿ ಹಾಗೂ ಡಿವಿಲಿಯರ್ಸ್ ಅವರ ನೆರವಿನಿಂದ ತಂಡ 160ರ ಗಡಿ ತಲುಪುವಲ್ಲಿ ಯಶಸ್ವಿಯಾಯಿತು.
ಆದರೆ ಆರ್‌ಸಿಬಿ ಬೌಲರ್‌ಗಳಿಗೆ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಈ ಮೊತ್ತ ಸಾಕಾಗಲಿಲ್ಲ.
ಭದ್ರ ಅಡಿಪಾಯ: ಆರ್‌ಸಿಬಿ ನೀಡಿದ ಗುರಿಯನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಶಿಖರ್ ಧವನ್ ಅವರಿಂದ ಶತಕದ ಜತೆಯಾಟದ ಮೂಲಕ ಭದ್ರ ಅಡಿಪಾಯ ಪಡೆಯಿತು.  ಆರಂಭದಿಂದಲೂ ಆರ್‌ಸಿಬಿ ಬೌಲರ್‌ಗಳ ದಾಳಿಯನ್ನು ಮೆಟ್ಟಿನಿಂತ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ತಂಡವನ್ನು ಜಯದ ಹಾದಿಯಲ್ಲಿ ಸಾಗುವಂತೆ ಮಾಡಿದರು. ಶಿಖರ್ ಧವನ್ (50 ರನ್, 39 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ವಾರ್ನರ್ (59 ರನ್, 46 ಎಸೆತ, 3 ಬೌಂಡರಿ, 4 ಸಿಕ್ಸರ್) ತಂಡದ ಗೆಲವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಸ್ಕೋರ್ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 6 ವಿಕೆಟ್‌ಗೆ 160
ಕ್ರಿಸ್ ಗೇಯ್ಲ್ ಸಿ ರಸೂಲ್ ಬಿ ಕರಣ್ 14, ಪಾರ್ಥಿವ್ ಪಟೇಲ್ ಎಲ್‌ಬಿ ಭುವನೇಶ್ವರ್ 4, ವಿರಾಟ್ ಕೊಹ್ಲಿ ಸಿ ಸ್ಟೇಯ್ನ್ ಬಿ ಪಠಾಣ್ 67, ಯುವರಾಜ್ ಸಿಂಗ್ ಸಿ ಸ್ಟೇಯ್ನ್ ಬಿ ರಸೂಲ್ 21, ಎಬಿ ಡಿವಿಲಿಯರ್ಸ್ ಬಿ ಭುವನೇಶ್ವರ್ 29, ಸಚಿನ್ ರಾಣಾ ಅಜೇಯ 12, ಮಿಚೆಲ್ ಸ್ಟಾರ್ಕ್ ರನೌಟ್ (ಓಜಾ) 6
ಇತರೆ: (ಬೈ 2, ಲೆಗ್ ಬೈ 1, ವೈಡ್ 4) ಒಟ್ಟು 7
ವಿಕೆಟ್ ಪತನ: 1-5, 2-23, 3-80, 4-141, 5-146, 6-160
ಬೌಲಿಂಗ್ ವಿವರ:
ಭುವನೇಶ್ವರ್ ಕುಮಾರ್ 4-0-27-2, ಡೇಲ್ ಸ್ಟೇಯ್ನ್ 4-0-23-0,
ಪರ್ವೆಜ್ ರಸೂಲ್ 4-0-26-1, ಕರಣ್ ಶರ್ಮಾ 3-0-27-1,
ವೇಣುಗೋಪಾಲ್ ರಾವ್ 1-0-7-0, ಇರ್ಫಾನ್ ಪಠಾಣ್ 3-0-28-1, ಡಾರೆನ್ ಸಾಮಿ 1-0-19-0    ಸನ್‌ರೈಸರ್ಸ್ ಹೈದರಾಬಾದ್ 19.4 ಓವರ್‌ಗಳಲ್ಲಿ 3 ವಿಕೆಟ್‌ಗೆ 161
ಶಿಖರ್ ಧವನ್ ರನೌಟ್ (ಯುವರಾಜ್/ಪಾರ್ಥಿವ್) 50, ಡೇವಿಡ್ ವಾರ್ನರ್ ಸಿ ಯುವರಾಜ್ ಬಿ ವರುಣ್ 59, ನಮನ್ ಓಜಾ ಸಿ ಯುವರಾಜ್ ಬಿ ವರುಣ್ 24, ಎರಾನ್ ಫಿಂಚ್ ಅಜೇಯ 11, ಡಾರೆನ್ ಸಾಮಿ ಅಜೇಯ 10, ಇತರೆ: (ಬೈ 2, ಲೆಗ್ ಬೈ 2, ವೈಡ್ 3) ಒಟ್ಟು 7
ವಿಕೆಟ್ ಪತನ: 1-100, 2-126, 3-150
ಬೌಲಿಂಗ್ ವಿವರ:
ಮುರಳಿಧರನ್ 4-0-26-0, ಮಿಚೆಲ್ ಸ್ಟಾರ್ಕ್ 3.4-0-31-0,     
ವರುಣ್ 4-0-36-2, ಅಬು ನಚಿಮ್ 2.2-0-22-0,     ಚಾಹಲ್ 4-0-32-0, ಯುವರಾಜ್ 1.4-0-10-0,     

ಪಂದ್ಯಶ್ರೇಷ್ಠ: ಡೇವಿಡ್ ವಾರ್ನರ್

ಅಂಕಪಟ್ಟಿ
ತಂಡ     ಪಂದ್ಯ     ಜಯ     ಸೋಲು     ಅಂಕ     ಸರಾಸರಿ
ಕಿಂಗ್ಸ್ ಇಲೆವೆನ್ ಪಂಜಾಬ್     11    9    2     18     ೤0.939
ಚೆನ್ನೈ ಸೂಪರ್ ಕಿಂಗ್ಸ್     11     8     3     16     ೤0.487
ರಾಜಸ್ಥಾನ ರಾಯಲ್ಸ್     12     7    5     14     ೤0.334
ಕೋಲ್ಕತಾ ನೈಟ್ ರೈಡರ್ಸ್     11    6    5     12     ೤0.087
ರಾಯಲ್ ಚಾಲೆಂಜರ್ಸ್ ಬೆಂಗಳೂರು     12     5     7     10    -0.263
ಸನ್‌ರೈಸರ್ಸ್ ಹೈದರಾಬಾದ್     12     5     7    10     -0.280
ಮುಂಬೈ ಇಂಡಿಯನ್ಸ್     11     4    7     8    -0.220
ಡೆಲ್ಲಿ ಡೇರ್‌ಡೆವಿಲ್ಸ್     12     2     10     4     -1.069

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement