ರೈಡರ್ಸ್ಗೆ ಸೋತ ಕಿಂಗ್ಸ್
ಕೋಲ್ಕತಾ: ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಮತ್ತು ಮಧ್ಯಮ ಕ್ರಮಾಂಕದಲ್ಲಿ ಶಕಿಬ್ ಅಲ್ ಹಸನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುವುದರೊಂದಿಗೆ ಕೋಲ್ಕತಾ ನೈಟ್ ರೈಡರ್ಸ್ ತಂಡ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ವಿಕೆಟ್ ಅಂತರದಿಂದ ಜಯ ಸಾಧಿಸಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆತಿಥೇಯ ಕೋಲ್ಕತಾ, ಅಚ್ಚುಕಟ್ಟಾದ ಪ್ರದರ್ಶನ ನೀಡುವ ಮೂಲಕ ಚೆನ್ನೈ ತಂಡವನ್ನು 154 ರನ್ಗಳಿಗೆ ನಿಯಂತ್ರಿಸಿತು. ನಂತರ 155 ರನ್ಗಳ ಗುರಿಯನ್ನು ಬೆನ್ನಟ್ಟಿದ ಕೋಲ್ಕತಾ 18 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 156 ರನ್ ಪೇರಿಸುವ ಮೂಲಕ ಜಯದ ಕೇಕೆ ಹಾಕಿತು.
ರಾಬಿನ್ ಉತ್ತಪ್ಪ (67) ಅರ್ಧ ಶತಕದಲ್ಲಿ 1 ಸಿಕ್ಸರ್ ಮತ್ತು 10 ಬೌಂಡರಿಗಳು ಸೇರಿದ್ದವು. ಇನ್ನು ಶಕೀಬ್ ಅಲ್ ಹಸನ್ ಮೊತ್ತದಲ್ಲಿ 2 ಸಿಕ್ಸರ್ ಮತ್ತು 6 ಬೌಂಡರಿಗಳು ಸೇರಿದ್ದವು.
ಚೆನ್ನೈ ಪರ ಈಶ್ವರ ಪಾಂಡೆ, ರವೀಂದ್ರ ಜಡೇಜಾ ಮಾತ್ರ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ, ಮಿಂಚಿದ ಸುರೇಶ್ ರೈನಾ (65) ಅರ್ಧ ಶತಕದ ನೆರವಿನೊಂದಿಗೆ 150 ರನ್ಗಳ ಗಡಿ ದಾಟಿತ್ತು. 52 ಎಸೆತಗಳನ್ನು ಎದುರಿಸಿದ ರೈನಾ ಅರ್ಧ ಶತಕದದಲ್ಲಿ 5 ಸಿಕ್ಸರ್ ಮತ್ತು 3 ಬೌಂಡರಿಗಳು ಸೇರಿದ್ದವು. ಕೋಲ್ಕತಾ ನೈಟ್ ರೈಡರ್ಸ್ ಪರ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ್ದ ಪ್ಯಾಟ್ ಕಮಿನ್ಸ್, ಸುನಿಲ್ ನಾರಾಯಣ ಹಾಗೂ ಪಿಯುಶ್ ಚಾವ್ಲಾ ತಲಾ ಒಂದು ವಿಕೆಟ್ ಪಡೆದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಕೋಲ್ಕತಾ ತಂಡದ ರಾಬಿನ್ ಉತ್ತಪ್ಪ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸ್ಕೋರ್ ವಿವರ
ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 4 ವಿಕೆಟ್ಗೆ 154
ಡ್ವೈನ್ ಸ್ಮಿತ್ ಬಿ ಕಮಿನ್ಸ್ 5 (6), ಬ್ರೆಂಡನ್ ಮೆಕಲಂ ಸಿ ಸೂರ್ಯಕುಮಾರ್ ಬಿ ನಾರಾಯಣ 28 (24), ಸುರೇಶ್ ರೈನಾ ಸಿ ಟೆನ್ ಡಯಾಶೆಟ್ ಬಿ ಚಾವ್ಲಾ 65 (52), ಡು ಪ್ಲೆಸಿಸ್ ರನೌಟ್ (ಚಾವ್ಲಾ) 23 (20), ಮಹೇಂದ್ರ ಸಿಂಗ್ ಧೋನಿ ಅಜೇಯ 21 (15), ರವೀಂದ್ರ ಜಡೇಜಾ ಅಜೇಯ 9 (4), ಇತರೆ (ವೈಡ್-2, ನೋಬಾಲ್-1) 3,
ವಿಕೆಟ್ ಪತನ: 1-5, 2-60, 3-122, 4-129.
ಬೌಲಿಂಗ್ ವಿವರ: ಶಕೀಬ್ ಅಲ್ ಹಸನ್ 4-0-30-0, ಪ್ಯಾಟ್ ಕಮಿನ್ಸ್ 4-1-29-1, ಉಮೇಶ್ ಯಾದವ್ 4-0-29-0, ಸುನಿಲ್ ನಾರಾಯಣ 4-0-24-1, ಪಿಯುಶ್ ಚಾವ್ಲಾ 4-0-42-1
ಕೋಲ್ಕತಾ ನೈಟ್ ರೈಡರ್ಸ್ 18 ಓವರ್ಗಳಲ್ಲಿ 2 ವಿಕೆಟ್ಗೆ 156
ರಾಬಿನ್ ಉತ್ತಪ್ಪ ಸಿ ಡುಪ್ಲೆಸಿಸ್ ಬಿ ಜಡೇಜಾ 67 (39), ಗೌತಮ್ ಗಂಭೀರ್ ಬಿ ಈಶ್ವರ ಪಾಂಡೆ 21 (20), ಮನೀಷ್ ಪಾಂಡೆ ಅಜೇಯ 18 (28), ಶಕೀಬ್ ಅಲ್ ಹಸನ್ ಅಜೇಯ 46 (21), ಇತರೆ (ಲೆಗ್ಬೈ-3, ವೈಡ್-1) 4
ವಿಕೆಟ್ ಪತನ: 1-64, 2-98
ಬೌಲಿಂಗ್ ವಿವರ: ಬೆನ್ ಹಿಲ್ಫೆನ್ಹಾಸ್ 3-0-38-0, ಈಶ್ವರ ಪಾಂಡೆ 4-0-31-1, ಮೋಹಿತ್ ಶರ್ಮಾ 3-0-28-0, ಆರ್. ಅಶ್ವಿನ್ 4-0-24-0, ರವೀಂದ್ರ ಜಡೇಜಾ 3-0-23-1, ಸುರೇಶ್ ರೈನಾ 1-0-9-0
ಪಂದ್ಯಶ್ರೇಷ್ಠ: ರಾಬಿನ್ ಉತ್ತಪ್ಪ