ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸೂಪರ್ ಡಿವಿಷನ್ ಫುಟ್ಬಾಲ್: ರೇಲ್ ವ್ಹೀಲ್ ಸೋಲಿಸಿದ ಎಂಇಜಿ

Srinivasa Murthy VN
Updated On : 21 May 2014, 2:12 am

ಬೆಂಗಳೂರು: ಆಕ್ರಮಣಕಾರಿ ದಾಳಿ ನಡೆಸಿದ ಮದ್ರಾಸ್ ಎಂಜಿನಿಯರ್ ಗ್ರೂಪ್ (ಎಂಇಜಿ) ಮಂಗಳವಾರ ನಡೆದ 'ಸೂಪರ್‌' ಡಿವಿಷನ್ ಫುಟ್ಬಾಲ್ ಪುಂದ್ಯಾವಳಿಯ ಪಂದ್ಯದಲ್ಲಿ ರೇಲ್ ವ್ಹೀಲ್ ಫ್ಯಾಕ್ಟರಿ (ಆರ್‌ಡಬ್ಲ್ಯುಎಫ್) ತಂಡವನ್ನು 5-1 ಗೋಲುಗಳ ಅಂತರದಿಂದ ಪರಾಭವಗೊಳಿಸಿತು.
ಎಂಇಜಿ ಪರ ಪಂದ್ಯದಲ್ಲಿ ಗಿರೀಶ್ ಮತ್ತು ದಿಪನ್ ಥಾಪ ತಲಾ ಎರಡು ಗೋಲು ದಾಖಲಿಸಿದರು. 13ನೇ ಮತ್ತು 41ನೇ ನಿಮಿಷದಲ್ಲಿ ಗಿರೀಶ್ ಗೋಲು ದಾಖಲಿಸಿದರೆ, 15ನೇ ಮತ್ತು 28ನೇ ನಿಮಿಷದಲ್ಲಿ ದಿಪನ್ ಥಾಪ ಗೋಲು ದಾಖಲಿಸಿದರು. 54ನೇ ನಿಮಿಷದಲ್ಲಿ ಹ್ಯಾಮರ್ ಗೋಲು ದಾಖಲಿಸಿದರು.
ಇದಕ್ಕೂ ಮುನ್ನ ಸಮಬಲದ ಹೋರಾಟ ನಡೆಸಿದ ಬೆಂಗಳೂರು ಇಂಡಿಪೆಂಡೆಂಟ್ ಮತ್ತು ಸಾಯ್ ತಂಡಗಳು 'ಎ' ಡಿವಿಷನ್ ಫುಟ್ಬಾಲ್ ಪುಂದ್ಯಾವಳಿಯಲ್ಲಿ ನಡೆದ ಪಂದ್ಯದಲ್ಲಿ 2-2 ಗೋಲುಗಳ ಅಂತರದಿಂದ ಡ್ರಾ ಸಾಧಿಸಿದವು.
ಇಂಡಿಪೆಂಡೆಂಟ್ ಪರ ಪಂದ್ಯದ 17ನೇ ಮತ್ತು 33ನೇ ನಿಮಿಷದಲ್ಲಿ ದೀಪಕ್ ಗೋಲು ದಾಖಲಿಸಿದರೆ, ಸಾಯ್ ಪರ 23ನೇ ನಿಮಿಷದಲ್ಲಿ ಸುದರ್ಶನ ಮತ್ತು 27ನೇ ನಿಮಿಷದಲ್ಲಿ ಸರೋಜ್‌ರಾಯ್ ಗೋಲು ದಾಖಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement