ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕುಂಬ್ಳೆ, ತಲಪಾಡಿ ತಂಡಗಳ ಮುನ್ನಡೆ

Srinivasa Murthy VN
Updated On : 29 May 2014, 1:03 am

ಸುಂಟಿಕೊಪ್ಪ: ಬ್ಲೂ ಬಾಯ್ಸ್ ಯೂತ್ ಕ್ಲಬ್ ಆಶ್ರಯದಲ್ಲಿ ದಿ. ಶಿವಪ್ಪ ಜ್ಞಾಪಕಾರ್ಥ ಜಿಎಂಪಿ ಶಾಲೆ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಡಿ.ಶಿವಪ್ಪ ಮೆಮೋರಿಯಲ್ ಗೋಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕುಂಬ್ಳೆ ಮತ್ತು ತಲಪಾಡಿ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿವೆ.
 ಬುಧವಾರ ನಡೆದ ಮೊದಲ ಪಂದ್ಯಾವಳಿಯಲ್ಲಿ ಬ್ರದರ್ಸ್ ಎಫ್‌ಸಿ ಮೋಗ್ರಲ್ ಕುಂಬ್ಳೆ ತಂಡ ಯಾಮೀಟಿ ಎಫ್‌ಸಿ ಗದ್ದೆಹಳ್ಳ ತಂಡದ ವಿರುದ್ಧ  2-0 ಗೋಲುಗಳಿಂದ ಜಯ ಗಳಿಸಿತು. ಎರಡೂ ತಂಡಗಳಿಗೆ ಮೊದಲಾರ್ಧದಲ್ಲಿ ಹಲವು ಅವಕಾಶಗಳು ದೊರೆತರೂ ಗೋಲು ಗಳಿಸುವಲ್ಲಿ ವಿಫಲಗೊಂಡವು. ದ್ವಿತೀಯಾರ್ಧದಲ್ಲಿ ಕುಂಬ್ಳೆ ತಂಡವು ವೇಗದ ಆಟಕ್ಕೆ ಇಳಿಯಿತು. ತಂಡದ ಮುನ್ನಡೆ ಆಟಗಾರ ರಿಫಯಾಲ್ 6ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಮುನ್ನಡೆ ಒದಗಿಸಿದರು. ತಂಡದ ಅನ್ವರ್ 8ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದರು.
ಅಲ್ಲದೆ, ಎದುರಾಳಿ ತಂಡದವರು ಗೋಲು ಗಳಿಸದಂತೆ ನಿಯಂತ್ರಿಸುವ ಮೂಲಕ 2-0 ಗೋಲುಗಳಿಂದ ಬ್ರದರ್ಸ್ ಎಫ್‌ಸಿ ಮೋಗ್ರಲ್ ಕುಂಬ್ಳೆ ತಂಡ ಜಯ ಗಳಿಸಿತು.
 ದ್ವಿತೀಯ ಪಂದ್ಯಾಟವು ಬೆನಕ ಎಫ್‌ಸಿ ಮಂಡ್ಯ ಹಾಗೂ ಎಚ್‌ಡಬ್ಯುಎಎಫ್‌ಸಿ ತಲಾಪಾಡಿ ಮಂಗಳೂರು ತಂಡಗಳ ನಡುವೆ ನಡೆದು, 3-0 ಗೋಲುಗಳಿಂದ ಎಚ್‌ಡಬ್ಯುಎಎಫ್‌ಸಿ ವಿಜಯ ಮಾಲೆ ಧರಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement