ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಡ್ರಾ ಫಲಿತಾಂಶಕ್ಕೆ ಬಿಎಫ್‌ಸಿ ತೃಪ್ತಿ

Srinivasa Murthy VN
Updated On : 29 May 2014, 1:02 am

ಬೆಂಗಳೂರು: ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡದ ಆಟಗಾರರು ರಾಜ್ಯ ಸೂಪರ್ ಡಿವಿಜನ್ ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಡ್ರಾ ಫಲಿತಾಂಶಕ್ಕೆ ತೃಪ್ತಿ ಹೊಂದಿದ್ದಾರೆ.
ಅಶೋಕನಗರದಲ್ಲಿರುವ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಫುಟ್ಬಾಲ್ ತಂಡ 1-1 ಗೋಲಿನಿಂದ ಜವಾಹರ್ ಯೂನಿಯನ್ ತಂಡದ ವಿರುದ್ಧ ಡ್ರಾ ಸಾಧಿಸುವ ಮೂಲಕ ತಲಾ ಒಂದೊಂದು ಅಂಕ ಹಂಚಿಕೆಗೆ ಸಮಾಧಾನಗೊಂಡಿತು.
ಪಂದ್ಯದ 82ನೇ ನಿಮಿಷದಲ್ಲಿ ಧೃವ ಗೋಲು ಬಾರಿಸಿ ಜವಾಹರ್ ಯೂನಿಯನ್ ತಂಡವನ್ನು ಗೆಲವಿನತ್ತ ಮುಖಮಾಡಿ ನಿಲ್ಲಿಸಿದ್ದರು. ಆದರೆ, ಆಟ ಮುಗಿಯಲು ಕೇವಲ ಒಂದು ನಿಮಿಷವಿದ್ದಾಗ ಬಿಎಫ್‌ಸಿ ಪರ ಎಸ್. ಸುಹಾಸ್ (89ನೇ ನಿಮಿಷ) ಆಕರ್ಷಕ ಗೋಲು ಬಾರಿಸಿ ಪಂದ್ಯ ಡ್ರಾಗೊಳ್ಳಲು ಕಾರಣರಾದರು.
ಮೊದಲ ಅವಧಿಯಲ್ಲಿ ಎರಡೂ ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಪರಸ್ಪರ ಉತ್ತಮ ಜಿದ್ದಾಜಿದ್ದಿನ ಹೋರಾಟ ಸಂಘಟಿಸಿದ ಪರಿಣಾಮ ಗೋಲು ಗಳಿಕೆಯ ಕೆಲ ಅವಕಾಶಗಳು ದೊರೆತರೂ ಸಹ ಗುರಿ ಸೇರುವಲ್ಲಿ ವಿಫಲವಾದವು.
ಆದರೆ, ಎರಡನೇ ಅವಧಿಯಲ್ಲಿ ಬೆಂಗಳೂರು ಎಫ್‌ಸಿ ಮತ್ತು ಜವಾಹರ್ ಯೂನಿಯನ್ ತಂಡಗಳ ಆಟಗಾರರು ತಮ್ಮ ದಾಳಿಯನ್ನು ತೀವ್ರಗೊಳಿಸಿಕೊಂಡವು. ಪರಿಣಾಮವಾಗಿ ಕೊನೆಯ ಹತ್ತು ನಿಮಿಷಗಳ ಆಟದಲ್ಲಿ ನ ಎರಡು ಗೋಲು ದಾಖಲಿಸುವುದರೊಂದಿಗೆ ಪಂದ್ಯದ ಕಾವು ಹೆಚ್ಚಿಸಿತು. ಆದರೆ, ತನಗೆ ದೊರೆತ ಮುನ್ನಡೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದ ಜವಾಹರ್ ಯೂನಿಯನ್ ಆಟಗಾರರಿಗೆ ಅಂತಿಮವಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಯಿತು.
ಇದಕ್ಕೂ ಮುನ್ನ ನಡೆದ “G’ ಡಿವಿಜನ್ ಲೀಗ್ ಪಂದ್ಯದಲ್ಲಿ ಸ್ಟುಡೆಂಟ್ ಯೂನಿಯನ್ ತಂಡ ಏಕೈಕ ಗೋಲಿನಿಂದ ಭಾರತೀಯ ಕ್ರೀಡಾ ಪ್ರಾಧಿಕಾರ ತಂಡದ ವಿರುದ್ಧ ಜಯಭೇರಿ ಬಾರಿಸಿತು.
ಉತ್ತಮ ಆಟವಾಡಿದ ಕೆ. ಪಂಡಿತ್ ಪಂದ್ಯದ 79ನೇ ನಿಮಿಷದಲ್ಲಿ ಗೋಲು ಗಾಖಲಿಸಿ ಸ್ಟುಡೆಂಟ್ ಯೂನಿಯನ್ ತಂಡಕ್ಕೆ ಗಲವು ತಂದುಕೊಟ್ಟರು.
ಗುರುವಾರ ನಡೆಯಲಿರುವ “G’ ಡಿವಿಜನ್ ಪಂದ್ಯದಲ್ಲಿ ಎಲ್‌ಆರ್‌ಡಿಇ ಮತ್ತು ಬಿಯುಎಫ್‌ಸಿ ಹಾಗೂ ಸೂಪರ್ ಡಿವಿಜನ್ ಲೀಗ್ ಪಂದ್ಯದಲ್ಲಿ ಎಚ್‌ಎಎಲ್ ಮತ್ತು ಎಡಿಇ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement