ಏಷ್ಯನ್ ಜೂ. ಅಥ್ಲೆಟಿಕ್ಸ್ಗೆ ಮೇಘನಾ, ವಿಜಯಕುಮಾರಿ
ಬೆಂಗಳೂರು: ಕರ್ನಾಟಕದ ಭರವಸೆಯ ಅಥ್ಲೀಟ್ಗಳಾದ ಮೇಘನಾ ಶೆಟ್ಟಿ ಮತ್ತು ವಿಜಯಕುಮಾರಿ ಅವರು ತೈಪೇನ ತೈಪೇ ನಗರದಲ್ಲಿ ಜೂನ್ 12ರಿಂದ 15ರ ವರೆಗೆ ನಡೆಯಲಿರುವ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ರಾಜ್ಯದಿಂದ ಆಯ್ಕೆಯಾಗಿರುವ ಈ ಇಬ್ಬರು ಅಥ್ಲೀಟಗಳಾದ ಮೇಘನಾ ಶೆಟ್ಟಿ ಅವರು 100 ಮೀಟರ್ ಹರ್ಡಲ್ಸ್ನಲ್ಲಿ ಹಾಗೂ ವಿಜಯಕುಮಾರಿ ಅವರು 4್ಢ100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾರತದ ಪರ ಟ್ರ್ಯಾಕ್ಗೆ ಇಳಿಯಲಿದ್ದಾರೆ.