ಎಎಸ್ಸಿ-ಎಂಇಜಿ ಡ್ರಾಗೆ ತೃಪ್ತಿ
ಬೆಂಗಳೂರು: ಎಎಸ್ಸಿ ಮತ್ತು ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ತಂಡಗಳು ರಾಜ್ಯ ಸೂಪರ್ ಡಿವಿಜನ್ ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪರಸ್ಪರ ಡ್ರಾ ಫಲಿತಾಂಶಕ್ಕೆ ನಿಟ್ಟುಸಿರು ಬಿಟ್ಟಿವೆ.
ಅಶೋಕನಗರದಲ್ಲಿರುವ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಎಎಸ್ಸಿ ಮತ್ತು ಎಂಇಜಿ ತಂಡಗಳು ತಲಾ 1-1 ಗೋಲಿನೊಂದಿಗೆ ಸಮಗೌರವ ಸಾಧಿಸಿದವು.
ಎಂಇಜಿ ಪರ ನ್ಯೂರ್ನಿಲಾಲ್ ಹಮಾಲ್ 35ನೇ ನಿಮಿಷ ಮತ್ತು ಎಎಸ್ಸಿ ಪರ ಅಮಿತ್ ರಾಯ್ 901ನೇ ನಿಮಿಷ ಗೋಲುಗಳಿಸಿ ಪಂದ್ಯ ಡ್ರಾಗೊಳ್ಳಲು ಕಾರಣರಾದರು.
ಇಂದೇ ನಡೆದ 'ಎ' ಡಿವಿಜನ್ ಪಂದ್ಯದಲ್ಲಿ ಬೆಂಗಳೂರು ಇಂಡಿಪೆಂಡೆಂಟ್ಸ್ ತಂಡ 4-2 ಗೋಲುಗಳಿಂದ ತಿಲಕ್ ಮೆಮೋರಿಯಲ್ ವಿರುದ್ಧ ಜಯಗಳಿಸಿತು.