ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಫೆಡರರ್ ಜಯದ ನಗೆ

Srinivasa Murthy VN
Updated On : 31 May 2014, 12:56 pm

ಪ್ಯಾರಿಸ್: ಸ್ವಿಜರ್ಲೆಂಡ್‌ನ ಟೆನಿಸ್ ತಾರೆ ರೋಜರ್ ಫೆಡರರ್ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ ಗೆಲವು ದಾಖಲಿಸಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಫೆಡರರ್ ತಮ್ಮ ಎದುರಾಳಿ ರಷ್ಯಾದ ಡಿಮಿಟ್ರಿ ಟರ್ಸ್‌ನೊವ್ ವಿರುದ್ಧ 7-5, 6-7 (7-9), 6-2, 6-4 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದರು.
ಮತ್ತೊಂದು ಪಂದ್ಯದಲ್ಲಿ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ 3-6, 2-6, 5-7 ಸೆಟ್‌ಗಳ ಅಂತರದಲ್ಲಿ ಲ್ಯಾಟ್ವಿಯಾದ ಎರ್ನೆಟ್ಸ್ ಗುಲ್ಬಿಸ್ ವಿರುದ್ಧ ಪರಾಭವಗೊಂಡಿದ್ದಾರೆ. ಈ ಮೂಲಕ ಪಂದ್ಯಾವಳಿಯಲ್ಲಿ ತಮ್ಮ ಅಭಿಯಾನ ಅಂತ್ಯಗೊಳಿಸಿದ್ದಾರೆ.
ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಅನಾ ಇವಾನೊವಿಚ್ ತಮ್ಮ ಎದುರಾಳಿ ಸ್ವಿಟೊಲಿನಾ ವಿರುದ್ಧ 7-5, 6-2 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದು, ಮುಂದಿನ ಹಂತಕ್ಕೆ ಪ್ರವೇಶಿಸಿದ್ದಾರೆ. ಇನ್ನು ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೊಪಣ್ಣ ಹಾಗೂ ಜತೆಗಾರ್ತಿ ಸ್ಲೊವೆನಿಯಾದ ಕ್ಯಾತರಿನಾ ಸೆರ್ಬೊಟ್ನಿಕ್ ಜೋಡಿಯು ತಮ್ಮ ಎದುರಾಳಿ ಜೋಡಿಯಾದ ತೈಮುರ್ಜ್ ಹಾಗೂ ಆ್ಯಂಡ್ರೆ ಲವಕೊವಾ ಹಾಗೂ ಮಾರ್ಕ್ ಲುಪೆಜ್ ವಿರುದ್ಧ 6-3, 6-4 ನೇರ ಸೆಟ್‌ಗಳ ಅಂತರದ ಗೆಲವು ದಾಖಲಿಸಿದ್ದಾರೆ.
ಇನ್ನು ಗುರುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ನ ಆ್ಯಂಡಿ ಮರ್ರೆ ಎರಡನೇ ಸುತ್ತಿನ ಪಂದ್ಯದಲ್ಲಿ ಮಾಟೊಸೆವಿಕ್ ವಿರುದ್ಧ 6-3, 6-1, 6-3 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement