ಮೋದಿ ರಾಜಿನಾಮೆ
ಅಹ್ಮದಾಬಾದ್: ಪ್ರಧಾನ ಮಂತ್ರಿ ನರೇಂದ್ರ ಮೊದಿ ಅವರು ಗುಜರಾತ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಅಧಿಕೃತವಾಗಿ ರಾಜಿನಾಮೆ ನೀಡಿದ್ದಾರೆ. ನರೇಂದ್ರ ಮೊದಿಯವರು ಜಿಸಿಎ ಅಧ್ಯಕ್ಷವನ್ನು ತ್ಯಜಿಸುತ್ತಿದ್ದು, ಗುರುವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ಪತ್ರವನ್ನು ನಮಗೆ ರವಾನಿಸಿದ್ದಾರೆ ಎಂದು ಜಿಸಿಎ ಕಾರ್ಯದರ್ಶಿ ರಾಜೇಶ್ ಪಟೇಲ್ ತಿಳಿಸಿದ್ದಾರೆ. ಸಂಸ್ಥೆಗೆ ನೂತನ ಅಧ್ಯಕ್ಷರನ್ನು ಜೂ.13ರಂದು ನಡೆಯಲಿರುವ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಮೊದಿ 2009ರ ಸೆ.15ರಂದು ಕಾಂಗ್ರೆಸ್ ಮುಖಂಡ ನರಹರಿ ಅಮಿನ್ ಅವರ ಬದಲಿಗೆ ಜಿಸಿಎ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಅಲ್ಲದೆ ಮೊದಿಯ ಆಪ್ತರು ಹಾಗೂ ಗುಜರಾತ್ ರಾಜ್ಯದ ಸಚಿವರಾಗಿದ್ದ ಅಮಿತ್ ಶಾ ಸಹ ಇದೇ ವರ್ಷ ಜಿಸಿಎನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.