ಆಂಗ್ಲರಿಗೆ ವಿರೋಚಿತ ಸೋಲು
ಲಂಡನ್: ಕೆಳ ಕ್ರಮಾಂಕದಲ್ಲಿ ಬಂದ ಜೋಸ್ ಬಟ್ಲರ್ (121) ಅಬ್ಬರದ ಶತಕದ ಹೊರತಾಗಿಯೂ ಆತಿಥೇಯ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ವಿರೋಚಿತ ಸೋಲನುಭವಿಸಿದೆ.
ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಶ್ರೀಲಂಕಾ ತಂಡ 7 ರನ್ಗಳ ಅಂತರದಲ್ಲಿ ಆಂಗ್ಲರ ಪಡೆಯನ್ನು ಮಣಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯನ್ನು 2-2 ಅಂತರದ ಸಮಬಲ ಸಾಧಿಸಿದೆ. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ ಇಂಗ್ಲೆಂಡ್ ತಂಡಕ್ಕೆ ಲಂಕಾ ಆಟಗಾರ ಕುಮಾರ್ ಸಂಗಕ್ಕಾರ ಕಾಡಿದರು. ಈ ಮೂಲಕ ಶ್ರೀಲಂಕಾ 50 ಓವರ್ಗಳಲ್ಲಿ 9 ವಿಕೆಟ್ಗೆ 300 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಡ್ ತಂಡ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 293 ರನ್ ದಾಖಲಿಸಿತು. ಶ್ರೀಲಂಕಾ ಪರ 104 ಎಸೆತಗಳನ್ನು ಎದುರಿಸಿದ ಕುಮಾರ್ ಸಂಗಕ್ಕಾರ 14 ಬೌಂಡರಿ ನೆರವಿನಿಂದ 112 ರನ್ ದಾಖಲಿಸಿದರು. ಉಳಿದಂತೆ ಆರಂಭಿಕ ದಿಲ್ಷಾನ್ 71 ರನ್ ದಾಖಲಿಸಿ ತಂಡಕ್ಕೆ ಆಸರೆಯಾದರು. ಇಂಗ್ಲೆಂಡ್ ತಂಡ 11 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಆಸರೆಯಾದ ಜೋಸ್ ಬಟ್ಲರ್, 74 ಎಸೆತಗಳಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 121 ರನ್ ದಾಖಲಿಸಿದರು. ಕಡೇಯ ಓವರ್ನಲ್ಲಿ ಬಟ್ಲರ್ ರನೌಟ್ ಆಗಿದ್ದು, ತಂಡಕ್ಕೆ ಹಿನ್ನಡೆಯಾಯಿತು.