ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬಾಲಿವುಡ್ v/s ಬಾಲಿವುಡ್

Srinivasa Murthy VN
Updated On : 1 Jun 2014, 1:40 am

ಬೆಂಗಳೂರು: ಐಪಿಎಲ್ ಫೈನಲ್ ಪಂದ್ಯದಲ್ಲಿ ಹೋರಾಡುವ ತಂಡಗಳು, ಇಬ್ಬರು ಬಾಲಿವುಡ್ ತಾರೆಗಳ ಮಾಲೀಕತ್ವದ್ದಾಗಿವೆ. ಹಾಗಾಗಿ ಈ ಕದನವನ್ನು ಒಂದು ರೀತಿಯಲ್ಲಿ ಬಾಲಿವುಡ್ ಢ/ಡ ಬಾಲಿವುಡ್ ಎಂದು ಹೇಳಬಹುದು. ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಲೀಕ ಶಾರುಖ್ ಖಾನ್ ಬಾಲಿವುಡ್‌ನ ಪ್ರಮುಖ ನಟರಾಗಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಸಹ ಶ್ರೇಷ್ಠ ನಟಿಯಾಗಿದ್ದಾರೆ. ಅಲ್ಲದೆ, ಈ ಇಬ್ಬರೂ ಹಲವಾರು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದು, ಒಂದು ಅರ್ಥದಲ್ಲಿ ಪಂದ್ಯಕ್ಕೆ ಬಾಲಿವುಡ್ ಬಣ್ಣದ ರಂಗು ಬಂದಂತಾಗಿದೆ. ಇವರನ್ನು ಹೊರತುಪಡಿಸಿ ಜೂಹಿ ಚಾವ್ಲಾ ಸಹ ಕೋಲ್ಕತಾ ತಂಡದ ಸಹ ಮಾಲಕಿಯಾಗಿದ್ದಾರೆ. ಹೀಗಾಗಿ ಬಾಲಿವುಡ್‌ನ ಇನ್ನಷ್ಟು ದಂಡು ಪಂದ್ಯಕ್ಕೆ ಆಗಮಿಸುವ ಎಲ್ಲ ನಿರೀಕ್ಷೆಗಳು ಉಂಟಾಗಿದ್ದು, ಕೆಲವರು ಪಂಜಾಬ್ ತಂಡವನ್ನು ಬೆಂಬಲಿಸಿದರೆ, ಇನ್ನು ಕೆಲವರು ಕೋಲ್ಕತಾ ತಂಡವನ್ನು ಬೆಂಬಲಿಸುವ ಸಾಧ್ಯತೆಗಳಿವೆ.

ಮಳೆಯ ಭೀತಿ
ಫೈನಲ್ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಹವಮಾನ ಇಲಾಖೆ ಪ್ರಕಾರ ನಗರದಲ್ಲಿ ಮುಂದಿನ ಕೆಲವು ದಿನ ಮಳೆಯಾಗುವ ಸಾಧ್ಯತೆ ಇದೆ. ಪಂದ್ಯದ ಮುನ್ನಾದಿನವಾದ ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಗುಡುಗು-ಸಿಡಿಲಿನಿಂದ ಕೂಡಿದ ಧಾರಾಕಾರ ಮಳೆ ಸುರಿದಿದೆ. ಮೈದಾನವನ್ನು ಪರದೆಯ ಮೂಲಕ ಸಂಪೂರ್ಣ ಮುಚ್ಚಲಾಗಿದ್ದರೂ, ಹೊರಾಂಗಣ ಒದ್ದೆಯಾಗಿದೆ. ಮೇಲಾಗಿ ಪಂದ್ಯದ ವೇಳೆಯು ಮಳೆ ಸುರಿಯುವ ಆತಂಕವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement